ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ತೆಯ ವಿದ್ಯಾರ್ಥಿಗಳು ಪುತ್ತೂರು ತಾಲೂಕು ದಸರಾ
ಕ್ರೀಡಾಕೂಟದಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. 8ನೇ ತರಗತಿಯ ವಿದ್ಯಾರ್ಥಿನಿ ದೃಶಾನ ಎಸ್ ಸರಳಿಕಾನ 100 ಮೀ ಓಟದಲ್ಲಿ ಬೆಳ್ಳಿ, 200 ಮೀ ಓಟದಲ್ಲಿ ಚಿನ್ನ ಹಾಗೂ 4 x100 ರಿಲೇಯಲ್ಲಿ ಬೆಳ್ಳಿಯ ಪದಕವನ್ನ ಪಡೆದಿರುತ್ತಾಳೆ.
10ನೇ ತರಗತಿಯ ಹಿತಾಲಿ ಪಿ ಶೆಟ್ಟಿ ಚಕ್ರ ಎಸೆತದಲ್ಲಿ ಕಂಚಿನ ಪದಕವನ್ನ ಪಡೆದಿರುತ್ತಾಳೆ. 9ನೇ ತರಗತಿಯ ತನ್ವಿ ಎ ರೈ, ಪೂರ್ವಿ ವಿ, ಬಿ ತ್ರಿಶಾ ಹಾಗೂ ದೃಶಾನ ಎಸ್ ಸರಳಿಕಾನ ಇವರು 4×100 ರಿಲೇಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 9ನೇ ತರಗತಿಯ
ರಕ್ಷಾ ಎಸ್ ಎಸ್, ಮನಸ್ವಿ ಎಸ್ ಪಿ, ಅದಿತಿ ಶೆಟ್ಟಿ ಹಾಗೂ ಪೂರ್ವಿ ವಿ 4×400 ಮೀ
ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. 8ನೇ ತರಗತಿಯ ಬಿ ತ್ರಿಶಾ 400 ಮೀ ಓಟದಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿರುತ್ತಾರೆ.
Ad