Bengaluru 27°C
Ad

ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ ಅದ್ವೈತ್ ಕೃಷ್ಣ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಫಿಲೋ ಪ್ರತಿಭೆ 2024' ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ.

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ ಅದ್ವೈತ್ ಕೃಷ್ಣ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಫಿಲೋ ಪ್ರತಿಭೆ 2024′
ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ.

‘ಶಿಕ್ಷಣದಲ್ಲಿ ತಂತ್ರಜ್ಞಾನದ ಪಾತ್ರ’ ಎಂಬ ಇಂಗ್ಲಿಷ್‌ ವಿಚಾರಗೋಷ್ಠಿಯಲ್ಲಿ ತೃತೀಯ ಸ್ಥಾನವನ್ನು ಮತ್ತು 9ನೇ ತರಗತಿಯ ವಿದ್ಯಾರ್ಥಿನಿಯರಾದ ರಕ್ಷಾ ಎಸ್ ಎಸ್, ವೈಷ್ಣವಿ ಯು ಆರ್, ನಿಧಿ ಎಂ ಯು ಮತ್ತು 8ನೇ ತರಗತಿಯ ಇಂಚರ ಎಸ್ ಮಯ್ಯ,
ಯಶಸ್ ಬಿ ಜೆಯವರು ‘ಗೀತ ಸುಧಾ ಗಾಯನ ಸ್ಪರ್ಧೆ’ ಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

Ad
Ad
Nk Channel Final 21 09 2023