Bengaluru 22°C

ಪ್ರೀತಿ ಸಾಲ್ಯಾನ್ ಕೆ ಅವರಿಗೆ ಡಾಕ್ಟರೇಟ್

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೀತಿ ಸಾಲ್ಯಾನ್ ಕೆ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇನ್ಫೋರ್ಮೇಶನ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೀತಿ ಸಾಲ್ಯಾನ್ ಕೆ ಅವರು ‘ಡಿಸೈನ್ & ಇಂಪ್ಲಿಮೆಂಟೇಶನ್ ಆಫ್ ಚೈಲ್ಡ್ ಆಕ್ಟಿವಿಟಿ ಡಿಟೆಕ್ಷನ್ & ಅನಾಮೊಲಿ ಕ್ಲಾಸಿಫಿಕೇಶನ್ ಇನ್ ಹೆಲ್ತ್ಕೇರ್ ಯೂಸಿಂಗ್ ಡೀಪ್ ಲರ್ನಿಂಗ್ ಫ್ರೇಮ್ವರ್ಕ್ ಇನ್ ವೀಡಿಯೋ ಸೀಕ್ವೆನ್ಸ್’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ಇತ್ತೀಚೆಗೆ ಡಾಕ್ಟರೇಟ್ ಪದವಿ ಘೋಷಿಸಿದೆ. ಇವರು ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಸಂಜೀವ್ ಕುಲ್ಕರ್ಣಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.


Nk Channel Final 21 09 2023