ಮಂಗಳೂರು: ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ್ ಗೌಡ್ ಬ್ರಾಹ್ಮಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶಕರ್ ಸಮುದಾಯದ ಪಿಯುಸಿ ಮತ್ತು ತತ್ಸಮಾನ ವಿದ್ಯಾರ್ಥಿಗಳಿಗೆ ವಸತಿ ಸಹಿತ ಮೂರು ದಿನಗಳ ಚಟುವಟಿಕೆ ಆಧಾರಿತ ‘ಪ್ರಗತಿ -2024’ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರವನ್ನು ಆ 02 ರಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ಸಿಎ ನಂದ ಗೋಪಾಲ್ ಶೆಣೈ ಇವರು ದೀಪವನ್ನು ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಈ ಕಾರ್ಯಗಾರವು ತಮ್ಮ ವ್ಯಕ್ತಿತ್ವಕ್ಕಿಂತಲೂ ಕೌಶಲ್ಯ ಮತ್ತು ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಗೌರವಿಸಿ, ಉಳಿಸಿ, ಬೆಳೆಸುವ ತರಬೇತಿಯನ್ನು ನೀಡಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಂಕಣಿ ಸಮಾಜಕ್ಕೆ ಪ್ರತಿಯೊಬ್ಬರು ಸೇವೆ ಸಲ್ಲಿಸಬೇಕು ಇದರಿಂದಾಗಿ ಸಮಾಜದ ಅಭಿವೃದ್ಧಿ ಹೊಂದಬೇಕು. ಇದರಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ಕೊಡುಗೆಗಳನ್ನು ನೀಡುವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿಗಳಾದ ಶ್ರೀ ಡಿ ರಮೇಶ್ ನಾಯಕ್ ಮೈರಾ, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಜಯ ಶೆಣೈ ಕೊಡಂಗೆ, ಕಾರ್ಯದರ್ಶಿಗಳಾದ ಶ್ರೀ ಮುರಳಿಧರ್ ಪ್ರಭು ವಗ್ಗ, ಕುಡಾಳ್ ದೇಶಸ್ಥ ಆದ್ಯ್ ಗೌಡ್ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಶೆಣೈ ಕೂಡಿಬೈಲು, ಕಾರ್ಯದರ್ಶಿಯರಾದ ಶ್ರೀ ದಯಾನಂದ ನಾಯಕ್ ಪುಂಜಾಲ್ ಕಟ್ಟೆ ಹಾಗೂ ಶ್ರೀ ಸುಧೀರ್ ನಾಯಕ್ ಅಮ್ಮೆಂಬಳ, ಸಂಜೀವ್ ಸಾವಂತ್ ಮರೋಳಿ, ಅನಂತ ಪ್ರಭು ಮರೋಳಿ, ಶ್ರೀಮತಿ ಸುಜಾತ ರಮೇಶ್ ಸಾಮಂತ್, ಶ್ರೀಮತಿ ಸುಚಿತ್ರ ರಮೇಶ್ ನಾಯಕ್, ಮುಂತಾದವರು ಉಪಸಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ದೇವದಾಸ್ ಪೈ ಶಿಬಿರಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ಕುಡ್ಪಿ ಶ್ರೀಮತಿ ವಿದ್ಯಾ ಶೆಣೈ ಉಪಸ್ಥಿತರಿದ್ದರು. ಡಾ. ವಿಜಯಲಕ್ಷ್ಮಿ ನಾಯಕ್ ಇವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.