Bengaluru 28°C
Ad

ಖಾಸಗಿ ಶಾಲಾ ಬಸ್ ಚಾಲಕನಿಗೆ ಪಿಡ್ಸ್: ವಿದ್ಯುತ್ ‌ಕಂಬಕ್ಕೆ ಬಸ್ ಡಿಕ್ಕಿ

ಇಲ್ಲಿನ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬಸ್ ಚಾಲಕನಿಗೆ ಮೂರ್ಚೆ ರೋಗ ( ಪಿಡ್ಸ್) ಉಂಟಾಗಿ ಬಸ್ ವಿದ್ಯುತ್ ‌ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಬಂಟ್ವಾಳ: ಇಲ್ಲಿನ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬಸ್ ಚಾಲಕನಿಗೆ ಮೂರ್ಚೆ ರೋಗ ( ಪಿಡ್ಸ್) ಉಂಟಾಗಿ ಬಸ್ ವಿದ್ಯುತ್ ‌ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಬಡಕಬೈಲು ಸೈಂಟ್ ಡೊಮಿನಿಕ್‌ ಆಂಗ್ಲ ‌ಮಾಧ್ಯಮ ಶಾಲೆಯ ಬಸ್ ಚಾಲಕ ಅಡ್ಡೂರು ನಿವಾಸಿ ಸುರೇಶ್ ಎಂಬವರಿಗೆ ಮೂರ್ಚೆ ರೋಗ ಬಾಧಿಸಿದ ಪರಿಣಾಮ ಬಸ್ ನಿಯಂತ್ರಣ ‌ಕಳೆದುಕೊಂಡು ರಸ್ತೆ ಬದಿಗೆ ತೆರಳಿ ವಿದ್ಯುತ್ ಕಂಬಕ್ಕೆ ‌ಡಿಕ್ಕಿ‌ಹೊಡೆದಿದೆ. ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ಚಾಲಕ ಸಹಿತ ವಿದ್ಯಾರ್ಥಿಗಳು ಪಾರಾಗಿದ್ದಾರೆ.

Ad
Ad
Nk Channel Final 21 09 2023