Bengaluru 17°C

ಬಿಡುಗಡೆ ಆಯ್ತು ‘ಪಯಣ್’ ಕೊಂಕಣಿ ಸಿನಿಮಾ ಟ್ರೈಲರ್ ಮತ್ತು ಆಡಿಯೊ

ʻಸಂಗೀತ್ ಘರ್ ಪ್ರೊಡಕ್ಶನ್ಸ್ʼ ಬ್ಯಾನರಿನಡಿಯಲ್ಲಿ ತಯಾರಾಗಿರುವ ‘ಪಯಣ್’ ಎಂಬ ಭಿನ್ನ ಹೆಸರಿನ ಕೊಂಕಣಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಟ್ರೈಲರ್ ಹಾಗೂ ಆಡಿಯೊ ಇದೀಗ ಬಿಡುಗಡೆ ಆಗಿದ್ದು, ಜೀವನದ ನಿಜವಾದ ಸಾಮರಸ್ಯಕ್ಕೆ ಸಂಗೀತ ಕಲೆಯ ನಿಪುಣತೆಗಿಂತಲೂ ಹೆಚ್ಚಿನದ್ದು ಬೇಕು ಎಂಬುದನ್ನು ಕಂಡುಹಿಡಿಯುವ ಸಂಗೀತಗಾರನ ಹೋರಾಟದ ಜೊತೆಗೆ, ಉತ್ತಮ ಸಂದೇಶ, ಥ್ರಿಲ್ಲರ್ ಅಂಶಗಳನ್ನು ಸಹ ಕತೆ ಒಳಗೊಂಡಿದೆ. ಆಡಿಯೊ Spotify, Apple Music, iTunes, Amazon, Pandora, Deezer, Tidal, iHeartRadio, Claro Música, Saavn, Boomplay, Anghami, NetEase, Tencent, Qobuz, Joox, Kuack Media, Adaptr, Flo, MediaNet ಗಳಲ್ಲಿ ಲಭ್ಯವಿದೆ. ‘ಪಯಣ್’ ಸಿನಿಮಾ ಸಪ್ಟೆಂಬರ್ 20ಕ್ಕೆ ತೆರೆ ಕಾಣಲಿದೆ.

ಮಂಗಳೂರು: ʻಸಂಗೀತ್ ಘರ್ ಪ್ರೊಡಕ್ಶನ್ಸ್ʼ ಬ್ಯಾನರಿನಡಿಯಲ್ಲಿ ತಯಾರಾಗಿರುವ ‘ಪಯಣ್’ ಎಂಬ ಭಿನ್ನ ಹೆಸರಿನ ಕೊಂಕಣಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಟ್ರೈಲರ್ ಹಾಗೂ ಆಡಿಯೊ ಇದೀಗ ಬಿಡುಗಡೆ ಆಗಿದ್ದು, ಜೀವನದ ನಿಜವಾದ ಸಾಮರಸ್ಯಕ್ಕೆ ಸಂಗೀತ ಕಲೆಯ ನಿಪುಣತೆಗಿಂತಲೂ ಹೆಚ್ಚಿನದ್ದು ಬೇಕು ಎಂಬುದನ್ನು ಕಂಡುಹಿಡಿಯುವ ಸಂಗೀತಗಾರನ ಹೋರಾಟದ ಜೊತೆಗೆ, ಉತ್ತಮ ಸಂದೇಶ, ಥ್ರಿಲ್ಲರ್ ಅಂಶಗಳನ್ನು ಸಹ ಕತೆ ಒಳಗೊಂಡಿದೆ. ಆಡಿಯೊ Spotify, Apple Music, iTunes, Amazon, Pandora, Deezer, Tidal, iHeartRadio, Claro Música, Saavn, Boomplay, Anghami, NetEase, Tencent, Qobuz, Joox, Kuack Media, Adaptr, Flo, MediaNet ಗಳಲ್ಲಿ ಲಭ್ಯವಿದೆ. ‘ಪಯಣ್’ ಸಿನಿಮಾ ಸಪ್ಟೆಂಬರ್ 20ಕ್ಕೆ ತೆರೆ ಕಾಣಲಿದೆ.


ತನ್ನ ಹೆಸರಿನಿಂದ, ಹಾಡುಗಳಿಂದ ಕುತೂಹಲ ಕೆರಳಿಸಿರುವ ‘ಪಯಣ್’ ಸಿನಿಮಾದ ಟ್ರೈಲರ್ ಆಗಸ್ಟ್ 18 ರಂದು ಭಾರತ್ ಸಿನೆಮಾದಲ್ಲಿ ಬಿಡುಗಡೆ ಮಾಡಲಾಯಿತು. ʻದಾಯ್ಜಿವರ್ಲ್ಡ್ʼ ಸಮೂಹ ಮಾಧ್ಯಮದ ಸ್ಥಾಪಕ, ಚಲನಚಿತ್ರ ನಟ ವಾಲ್ಟರ್ ನಂದಳಿಕೆ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ʻಕೊಂಕಣಿ ನಾಟಕ್ ಸಭಾʼ ಇದರ ಅಧ್ಯಕ್ಷ ವಂ| ರೊಕಿ ಡಿʼಕುನ್ಹಾ ಆಶೀರ್ವಚನ ಮಾಡಿದರು.


ಟ್ರೈಲರ್ ಬಿಡುಗಡೆ ಮಾಡಿದ ನಟ ನಂದಳಿಕೆ ಅವರು, ‘ಸಿನಿಮಾದ ಟ್ರೈಲರ್ ಅತ್ಯಂತ ರೋಚಕವಾಗಿ ಮೂಡಿಬಂದಿದೆ. ಸಿನಿಮಾದಲ್ಲಿ ಸಸ್ಪೆನ್ಸ್ ಜೊತೆಗೆ ಒಂದೊಳ್ಳೆ ಸಂದೇಶ ಇದೆ ಎಂಬುದು ತಿಳಿದು ಬರುತ್ತಿದೆ. ಕೊಂಕಣಿ ಸಿನಿಮಾ ರಂಗದಲ್ಲಿ ಇದೊಂದು ಮೈಲಿಗಲ್ಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಎಲ್ಲರೂ ದಯವಿಟ್ಟು ಸಿನಿಮಾ ನೋಡಿ ಆಶೀರ್ವದಿಸಿ’ ಎಂದರು.


‘ಪಯಣ್’ ಸಿನಿಮಾವನ್ನು ಜೊಯೆಲ್ ಪಿರೇರಾ ನಿರ್ದೇಶನ ಮಾಡಿದ್ದಾರೆ. ಪರಿಕಲ್ಪನೆ ಮತ್ತು ಹಾಡುಗಳು: ಮೆಲ್ವಿನ್ ಪೆರಿಸ್, ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಬ್ರಾಯನ್ ಸಿಕ್ವೇರಾ, ಜಾಸ್ಮಿನ್ ಡಿʼಸೋಜಾ, ಕೇಟ್ ಪಿರೇರಾ, ಶೈನಾ ಡಿʼಸೋಜ, ರೈನಲ್ ಸಿಕ್ವೇರಾ, ಲೆಸ್ಲಿ ರೇಗೊ, ಜೆರಿ ರಸ್ಕಿನ್ಹಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ ಮತ್ತಿತರರಿದ್ದಾರೆ. ತಾಂತ್ರಿಕ ವರ್ಗ- ಛಾಯಾಗ್ರಹಣ: ವಿ. ರಾಮಾಂಜನೆಯ; ಸಂಕಲನ: ಮೆವಿನ್ ಜೊಯೆಲ್ ಪಿಂಟೊ. ಸಂಗೀತ: ರೋಶನ್ ಡಿʼಸೋಜಾ, ಆಂಜೆಲೊರ್; ನಿರ್ಮಾಪಕಿ: ನೀಟ ಜೋನ್ ಪೆರಿಸ್.


Nk Channel Final 21 09 2023