ಪುತ್ತೂರು: ಬ್ರಿಟೀಷರ ದಾಸ್ಯದಿಂದ ಸ್ವಾತಂತ್ರ್ಯ ಪಡೆದ ಭಾರತದ ಆರ್ಥಿಕ ಪರಿಸ್ಥಿತಿ ಹದೆಗೆಟ್ಟಿರುವ ಸಂದರ್ಭದಲ್ಲಿ ಈ ದೇಶದ ಚುಕ್ಕಾಣಿಯನ್ನು ಹಿಡಿದು ಅಭಿವೃದ್ಧಿ ಪಾತದತ್ತ ಕೊಂಡೊಯ್ದ ಉತ್ತಮ ಆಡಳಿಗಾರ ನಮ್ಮ ಹೆಮ್ಮೆಯ ಮಾಜಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು.
ಇಂದು ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಜನಪರ ಕಾರ್ಯಕ್ರಮಗಳಿಗೆ ಅಡಿಗಲ್ಲು ಹಾಕಿದವರು ನೆಹರು. ಎಲ್ಲರೂ ತಮ್ಮ ಜನುಮದಿನ ಆಚರಿಸಬೇಕು ಎನ್ನುವ ಆಕಾಂಕ್ಷೆ ಹೊಂದಿದ್ದರೆ ನೆಹರೂ ಮಾತ್ರ ಭವಿಷ್ಯದ ಭಾರತದ ಪ್ರಜೆಗಳಾಗಲಿರುವ ಮಕ್ಕಳ ಹಬ್ಬ ವಾಗಿ ಮಾಡಲು ಬಯಸಿದ್ದರು. ಇದು ಅವರ ನಿಷ್ಕಲ್ಮಶ ವ್ಯಕ್ತಿತ್ತವಕ್ಕೆ ಹಿಡಿದ ಕೈಗನ್ನಡಿ ಎಂದು ನೆಹರೂ ಜನುಮದಿನ, ಮಕ್ಕಳು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕೃಷ್ಣಪ್ರಸಾದ್ ಆಳ್ವರು ಅಭಿಪ್ರಾಯಿಸಿದರು.
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಸುಮಾರು 14 ವರ್ಷಗಳ ಕಾಲ ಸೇವೆ ಸಲ್ಲಿಸಿ, ಹಸಿರು ಕ್ರಾಂತಿ, ಸಾಮಾಜಿಕ ನ್ಯಾಯ, ಆರ್ಥಿಕ ಸದೃಢತೆ ಹೀಗೆ ಹತ್ತು ಹಲವು ಯೋಚನೆಗಳ ಮೂಲಕ ಈ ದೇಶದ ಜನರಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಯಶಸ್ಸನ್ನು ಕಂಡವರು ಪಂಡಿತ್ ಜವಹರಲಾಲ್ ನೆಹರು. ಇವರ ನಡೆ, ಇವರ ಮುಂದಾಲೋಚನೆ ನಮಗೆ ಇಂದೂ ಕೂಡ ಪ್ರಸ್ತುತವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಮುಹಮ್ಮದ್ ಬಡಗನ್ನೂರು ಹೇಳಿದರು.
ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಪೂರ್ಣೇಶ್ ಬಂಡಾರಿ, ಮುಂಡೂರು ವಲಯ ಅಧ್ಯಕ್ಷ ಸುಪ್ರೀತ್ ಕಣ್ಣರಾಯ, ಶರೀಫ್ ಬಲ್ಲಾಡ್, ಸೂಫಿ ಬಪ್ಪಳಿಗೆ, ಎ ಶ್ರೀಧರ ಗೌಡ, ಗಂಗಾಧರ ಶೆಟ್ಟಿ ಎಲಿಕ, ಆದಂ ಕುಂಞಿ ಕಲ್ಲರ್ಪೆ, ಅಬ್ದುಲ್ ರಝಾಕ್, ವಿಶ್ವಜೀತ್ ಅಮ್ಮುಂಜೆ ಉಪಸ್ಥಿತರಿದ್ದರು. ಬಾಬು ಎಂ ಪ್ರಾರ್ಥಿಸಿದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಮ ಮೇನಾಲ ವಂದಿಸಿದರು.