Bengaluru 26°C
Ad

ದಿ.ಅನಿಲ್ ಪೂಜಾರಿಯವರ ಕುಟುಂಬಕ್ಕೆ ʼಭರವಸೆಯ ಬೆಳಕಾದʼ ಕಾಂಗ್ರೆಸ್ ನ ಪದ್ಮರಾಜ್ ಆರ್. ಪೂಜಾರಿ

Padhmaraj

ಮಂಗಳೂರು:  ಲೋಕಸಭೆ ಚುನಾವಣೆಯಲ್ಲಿ ಸೋತರೂ ಧೃತಿಗೆಡದೆ ಮತ್ತೆ ಸಮಾಜಮುಖಿ ಸೇವೆಯಲ್ಲಿ ತೊಡಗಿದ್ದಾರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷರಾದ ಪದ್ಮರಾಜ್ ಆರ್.ಪೂಜಾರಿ.

“ನಾನು ಬಡವರ ಕಣ್ಣೀರೊರೆಸುವ ಕಾರ್ಯ ಮಾಡಬೇಕು ಎನ್ನುವ ಮನದಾಸೆಯಿಂದ ಇತ್ತೀಚೆಗೆ ನಿಧನರಾದ ಕೊಡಿಪ್ಪಾಡಿ ಗ್ರಾಮದ ಬಟ್ರುಪ್ಪಾಡಿ ನಿವಾಸಿ, ಆಟೋಚಾಲಕ ದಿ.ಅನಿಲ್ ಪೂಜಾರಿಯವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವುದರ ಜತೆಗೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಧನಸಹಾಯ ನೀಡಿ ನಾವು ನಿಮ್ಮೊಂದಿಗೆ ಇದ್ದೇವೆ” ಎಂದು ಭರವಸೆಯ ಮಾತು ಹೇಳಿ ಮಾದರಿ ರಾಜಕಾರಣಿಯಾಗಿದ್ದಾರೆ.

Padmraj

ಹೌದು. .  ಪುತ್ತೂರು ತಾ| ಕೊಡಿಪ್ಪಾಡಿಗ್ರಾಮದ ಬಟ್ರುಪ್ಪಾಡಿ ನಿವಾಸಿ, ಆಟೋ ಚಾಲಕರಾಗಿದ್ದ ದಿ.ಅನಿಲ್ ಪೂಜಾರಿಯವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರ ನಿವಾಸಕ್ಕೆ ಭೇಟಿ ನೀಡಿ ಗುರುಬೆಳದಿಂಗಳು ಫೌಂಡೇಶನ್ ಮೂಲಕ ಆರ್ಥಿಕ ನೆರವು ಹಸ್ತಾಂತರಿಸಿದೆ.

ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಂ, ಹಿಂದುಳಿದ ವರ್ಗ ಬ್ಲಾಕ್ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಕೊಡಿಪ್ಪಾಡಿ ವಲಯ ಅಧ್ಯಕ್ಷ ಕೇಶವಪೆಲತ್ತಡಿ, ಪ್ರವೀಣ್ ಶೆಟ್ಟಿ ಅಳಕೆಮಜಲು, ನೌಶಾದ್, ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀಪ್ರಸಾದ್‌ ಪಾಣಾಜೆ, ದಾಮೋದರ ಮುರ, ನಗರ ಸಭಾ ಸದಸ್ಯ ರಿಯಾಝ್ ಪರ್ಲಡ್ಕ, ಶರತ್ ಕೇಫುಳು, ಯಂಗ್ ಬ್ರಿಗೆಡ್ ರಾಜ್ಯಾಧ್ಯಕ್ಷ ಜುನೈದ್ ಪಿ ಕೆ, ಮೆಸ್ಕಾಮ ಸಲಹಸಮಿತಿ ಸದಸ್ಯರಾದ ಚಂದ್ರ ಶೇಖರ ಕಲ್ಲಗುಡ್ಡೆ, ಚಂದ್ರ ಅರ್ಕ ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad