Ad

ಮಂಗಳೂರು: ರಾಹುಲ್ ಗಾಂಧಿ ಬಗ್ಗೆ ಭರತ್ ಶೆಟ್ಟಿ ಹೇಳಿಕೆಗೆ ವ್ಯಾಪಕ ವಿರೋಧ

Shtr

ಮಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಇತ್ತೀಚೆಗೆ ಹಿಂದೂಗಳ ಕುರಿತು ಆಡಿದ ಮಾತುಗಳು ಭಾರೀ ವಿವಾದ ಸೃಷ್ಟಿಸಿದ್ದು ಮಂಗಳೂರಿನಲ್ಲಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಂಗಳೂರು ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಭರತ್ ಶೆಟ್ಟಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಮಾಜಿ ಸಚಿವ ರಮನಾಥ್ ರೈ ಕೆಂಡಕಾರಿದ್ದಾರೆ.

Ad
300x250 2

ರಾಹುಲ್ ಗಾಂಧಿ ಬೊಗಳುತ್ತಿದ್ದಾನೆ. ರಾಹುಲ್‌ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಿಬೇಕು ಎಂದು ಭರತ್ ಶೆಟ್ಟಿ ನೀಡಿದ್ದ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಭರತ್ ಶೆಟ್ಟಿ ಹೇಳಿಕೆಗೆ ಮಾಜಿ ಸಚಿವ ರಮನಾಥ್ ರೈ ಕಿಡಿಕಾರಿದ್ದಾರೆ.

ಬಿಜೆಪಿಯ ಶಾಸಕರು ರಾಹುಲ್ ಗಾಂಧಿ ಮಾತನಾಡಿರೋದನ್ನು ಅಪಾರ್ಥ ಮಾಡಿಕೊಂಡಿದ್ದಾರೆ. ಭರತ್ ಶೆಟ್ಟಿ ಶಾಸಕನಾಗೋದಕ್ಕೆ ನಾಲಾಯಕ್. ಅವನು ಯೋಗ್ಯತೆ ಇಲ್ಲದ ಮನುಷ್ಯ. ಅವನು ರಾಹುಲ್ ಗಾಂಧಿ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾನೆ. ರಾಹುಲ್ ಗಾಂಧಿ‌ ಅವರಿಗೆ ಕಪಾಳಕ್ಕೆ ಹೊಡಿಬೇಕು ಎಂದು ಹೇಳಿದ್ದಾನೆ. ಅವನು ಮೊದಲು ನಮ್ಮ ಸಾಮಾನ್ಯ ಕಾರ್ಯಕರ್ತನ ಮೇಲೆ ಕೈ ಮಾಡಲಿ. ತಾಕತ್ತು ಇದ್ರೆ ಅವ ಗಂಡು ಮಗ ಆಗಿದ್ರೆ ಕಾರ್ಯಕರ್ತನ ಮೇಲೆ ಕೈ ಹಾಕಲಿ. ಆಮೇಲೆ ಜಿಲ್ಲೆಯಲ್ಲಿ ಏನು ಆಗುತ್ತೆ ಎಂದು ನಾನು ನೋಡ್ತೇನೆ.

ಬೆಳ್ತಂಗಡಿ ಶಾಸಕ‌ ಅಧಿಕಾರಿಗಳ ಮೇಲೆ ಕೈ ಮಾಡಲು ಹೋಗ್ತಾನೆ. ಭರತ್ ಶೆಟ್ಟಿ ವಿರೋಧ ಪಕ್ಷದ ನಾಯಕನಿಗೆ ಕಪಾಲಕ್ಕೆ ಹೊಡಿಬೇಕು ಅಂತಾನೆ. ಅವನ ಮೇಲೆ ಸುಮೋಟೊ ಕೇಸ್ ಹಾಕಬೇಕು. ಈ ಮಾತುಗಳನ್ನು ನಾವು ಸಹಿಸಲು ಸಾಧ್ಯವಿಲ್ಲ. ನಾವು ಸಣ್ಣಪುಟ್ಟ ಮಾತನಾಡಿದ್ರೆ ದೊಡ್ಡ ರಂಪಾಟ ಮಾಡುತ್ತಾರೆ ಎಂದು ಆಕ್ರೋಶ ಹೊರ ಹಾಕಿದದಾರೆ.

ಮಂಗಳೂರಿನಲ್ಲಿ ಕಳೆದ ದಿನ ನಡೆದ ಪ್ರತಿಭಟನಾ ಸಭೆಯಲ್ಲಿ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದರು. ಬಾಯಿಗೆ ಬಂದ ಹಾಗೆ ರಾಹುಲ್ ಗಾಂಧಿ ಬೊಗಳುತ್ತಿದ್ದಾನೆ. ಆತ ದೊಡ್ಡ ಹುಚ್ಚ. ರಾಹುಲ್‌ ಗಾಂಧಿಗೆ ಸಂಸತ್ತಿನೊಳಗೇ ಹೋಗಿ ಬಾಗಿಲು ಹಾಕಿಕೊಂಡು ಕೆನ್ನೆಗೆ ಎರಡು ಬಾರಿಸಿಬೇಕು. 99 ಸೀಟು ಹಿಡಿದುಕೊಂಡು ಏನೋ ಸಾಧನೆ ಮಾಡಿದಾಗೆ ಇವನು ಮಾತನಾಡುತ್ತಿದ್ದಾನೆ ಎಂದು ಭರತ್ ಶೆಟ್ಟಿ ಕಿಡಿಕಾರಿದ್ದರು.

 

Ad
Ad
Nk Channel Final 21 09 2023
Ad