Ad

ಮಂಗಳೂರಿನ ಎಲೆಕ್ಟಿಕಲ್ ಪ್ಯಾಂಟ್‌ನಲ್ಲಿ ʼಹವೆಲ್ಸ್ ಶಾಪ್ ಎನ್ ಶಾಪ್ʼ ಉದ್ಘಾಟನೆ

'ಎಲೆಕ್ಟಿಕಲ್ ಪ್ಯಾಂಟ್'ನಲ್ಲಿ ಸೋಮವಾರ (ಜುಲೈ 1ರಂದು) ಹವೆಲ್ಸ್ ಉತ್ಪಾದನೆಗಳಿಗಾಗಿಯೇ ಮೀಸಲಾದ 'ಹವೆಲ್ಸ್ ಶಾಪ್ ಎನ್ ಶಾಪ್' ವಿಭಾಗವನ್ನು ಎಲೆಕ್ಟಿಕಲ್ ಪ್ಯಾಂಟ್ ನಿರ್ದೇಶಕಿ ಶ್ರೀಮತಿ ಪ್ರೆಸಿಲ್ಲಾ ಸಿಕ್ಕೇರಾ ಅವರು ಉದ್ಘಾಟಿಸಿದರು.

ಮಂಗಳೂರು: 2000ನೇ ಇಸವಿಯಲ್ಲಿ ಆರಂಭಗೊಂಡು ಪ್ರಗತಿಪಥದಲ್ಲಿ ಮುನ್ನಡೆಯುತ್ತಿರುವ ಅಲಂಕಾರಿಕ ದೀಪ ಹಾಗೂ ಎಲೆಕ್ಟಿಕ್ ಉಪಕರಣಗಳ ಮಾರಾಟದಲ್ಲಿ ಕರಾವಳಿ ಕರ್ನಾಟಕದ ಮುಂಚೂಣಿ ಸಂಸ್ಥೆ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ‘ಎಲೆಕ್ಟಿಕಲ್ ಪ್ಯಾಂಟ್’ನಲ್ಲಿ ಸೋಮವಾರ (ಜುಲೈ 1ರಂದು) ಹವೆಲ್ಸ್ ಉತ್ಪಾದನೆಗಳಿಗಾಗಿಯೇ ಮೀಸಲಾದ ‘ಹವೆಲ್ಸ್ ಶಾಪ್ ಎನ್ ಶಾಪ್’ ವಿಭಾಗವನ್ನು ಎಲೆಕ್ಟಿಕಲ್ ಪ್ಯಾಂಟ್ ನಿರ್ದೇಶಕಿ ಶ್ರೀಮತಿ ಪ್ರೆಸಿಲ್ಲಾ ಸಿಕ್ಕೇರಾ ಅವರು ಉದ್ಘಾಟಿಸಿದರು.

Ad
300x250 2

ಎಲೆಕ್ಟಿಕಲ್ ಪ್ಯಾಂಟ್ ಮಾಲಕ ವಿನೋದ್ ಸಿಕ್ವೆರಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹವೆಲ್ಸ್ ಉತ್ಪಾದನೆಗಳು, ಹವೆಲ್ಸ್ ನೊಂದಿಗೆ ತಮ್ಮ ಸಂಸ್ಥೆಯ ಸಂಬಂಧ ಹಾಗೂ ವ್ಯವಹಾರದ ಕುರಿತು ವಿವರಿಸಿದರು. ಎಲೆಕ್ಟಿಕಲ್ ಪ್ಯಾಂಟ್ ಗ್ರಾಹಕರ ಅನುಕೂಲ ಹಾಗೂ ಆಯ್ಕೆಯಲ್ಲಿ ಸಮಯದ ಉಳಿತಾಯಕ್ಕಾಗಿ ಹವೆಲ್ಸ್ ಉತ್ಪಾದನೆಗಳಿಗಾಗಿಯೇ ಮೀಸಲಾದ ವಿಭಾಗವನ್ನು ಆರಂಭಿಸಿದ ಬಗ್ಗೆ ತಿಳಿಸಿದರು.

ಹವೆಲ್ಸ್ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಎಸ್. ಮುತ್ತು (ಲೈಟಿಂಗ್), ಸಂದೀಪ್‌ (ಫ್ಯಾನ್), ರೂಪೇಶ್ (ಅಪ್ಲಾಯನ್ಸಸ್), ನಿತಿನ್ (ಸ್ವಿಚ್ಚಸ್) ಅವರು ಹಾಜರಿದ್ದು ಶುಭ ಹಾರೈಸಿದರು. ಆರಂಭದಲ್ಲಿ ಸ್ವಾಗತಿಸಿದ ಮರಿಯಾ ಎಡ್ವಟಾಯ್ಸರ್ಸ್ ಮಾಲಕ ಎಚ್. ಆರ್. ಆಳ್ವ ಅವರು ಕಾರ್ಯಕ್ರಮ ನಿರ್ವಹಿಸಿದರು. ಎಲೆಕ್ಟಿಕಲ್ ಪ್ಯಾಂಟ್ ನಿರ್ದೇಶಕ ವೀರಜ್ ಸಿಕ್ವೆರಾ, ಸಂಸ್ಥೆಯ ಸಿಬ್ಬಂದಿ ಮತ್ತು ಗ್ರಾಹಕರು ಉಪಸ್ಥಿತರಿದ್ದರು. ಎಲೆಕ್ಟಿಕಲ್ ಪ್ಯಾಂಟ್ ಮ್ಯಾನೇಜರ್ ಶ್ರೀಮತಿ ಗೀತಾ ಅವರು ವಂದಿಸಿದರು.

ಮಾನ್ಸೂನ್ ಮೇಳ ಆರಂಭೋತ್ಸವ: ಇದೇ ಸಂದರ್ಭದಲ್ಲಿ, ವಿವಿಧ ಕಂಪೆನಿಗಳ ಅಲಂಕಾರ ದೀಪಗಳು, ಎಲೆಕ್ಟಿಕ್ ಸಾಧನಗಳು, ಎಲ್‌ಇಡಿ ಫಿಟ್ಟಿಂಗ್ಸ್, ಫ್ಯಾನ್ ಮತ್ತು ವಿದ್ಯುತ್ ಪರಿಕರಗಳ ರಿಯಾಯಿತಿ ದರ ಮಾರಾಟದ ‘ಎಲೆಕ್ಟಿಕಲ್ ಪ್ಯಾಂಟ್ ಮಾನ್ಸೂನ್ ಮೇಳ’ದ ಆರಂಭೋತ್ಸವ ಜರಗಿತು. ಈ ಮೇಳ ಆಗಸ್ಟ್ 10ರವರೆಗೆ ಜರಗಲಿದೆ.

Nkl 5532 Nkl 5537 Nkl 5523 Nkl 5524 Nkl 5530 Nkl 5494 Nkl 5501 Nkl 5508 Nkl 5478 Nkl 5484 Nkl 5488 Nkl 5472 Nkl 5473 Nkl 5475

Ad
Ad
Nk Channel Final 21 09 2023
Ad