Bengaluru 22°C
Ad

ʼಕೈʼ ಅಭ್ಯರ್ಥಿ ಪದ್ಮರಾಜ್ ಗೆ ಸೋಲು : ಬಿಲ್ಲವ ಸಮುದಾಯದ ವಿರುದ್ಧ ಅಕ್ಷೇಪಾರ್ಹ ವಾಯ್ಸ್ ಮೆಸೇಜ್

ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ. ಸೋಲಿನ ಹಿನ್ನಲೆಯಲ್ಲಿ ಬಿಲ್ಲವ ಸಮುದಾಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಕ್ಷೇಪಾರ್ಹ ವಾಯ್ಸ್ ಮೆಸೇಜ್ ರವಾನೆ ಆಗಿದೆ.

ಮಂಗಳೂರು: ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ. ಸೋಲಿನ ಹಿನ್ನಲೆಯಲ್ಲಿ ಬಿಲ್ಲವ ಸಮುದಾಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಕ್ಷೇಪಾರ್ಹ ವಾಯ್ಸ್ ಮೆಸೇಜ್ ರವಾನೆ ಆಗಿದೆ.

ವಾಯ್ಸ್‌ ನೋಟ್‌ ನಲ್ಲಿ ಕಾಂಗ್ರೇಸ್ ಮುಖಂಡರು ಬಿಲ್ಲವರೆಲ್ಲಾ (ಪೂಜಾರಿಗಳು) ಕಾಂಗ್ರೆಸ್ ಗೆ ಮತ ನೀಡುತ್ತಾರೆ ಎನ್ನುತ್ತಿದ್ದರು. ಆದರೆ ಪೂಜಾರಿಗಳು ಮತ ಹಾಕಿದ್ದಲ್ಲ. ಅವರೆಲ್ಲಾ ಬಂಟರ ಬಾರ್ ನಲ್ಲಿ ಹೋಗಿ ಮದ್ಯ ಸೇವಿಸಿದ್ದು. ಕಾಂಗ್ರೇಸ್ ಕೈಗೆ ಚೊಂಬು ಕೊಟ್ಟಿದ್ದು. ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಇದನ್ನು ನಂಬಿ ಕಾಂಗ್ರೆಸ್ ಗೆ ಮತ ಹಾಕಿದ್ದರು. ಆದರೆ ಪೂಜಾರಿಗಳು ಕಾಂಗ್ರೇಸ್ ಕೈಗೆ ಚೊಂಬು ಕೊಟ್ಟರು ಎಂಬ ಬಿಲ್ಲವ ಸಮುದಾಯದ ವಿರುದ್ಧ ಆಕ್ಷೇಪಾರ್ಹ ವಾಯ್ಸ್ ಮೆಸೇಜ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Ad
Ad
Nk Channel Final 21 09 2023
Ad