ಮಂಗಳೂರು: ನವ್ಯಾರಂಭ ಪಿಜಿ ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನಾ ಅಧಿವೇಶನವು ಸೆ.18 ರಂದು ಬೆಳಿಗ್ಗೆ ವೈ.ಎಂ.ಕೆ ಆಡಿಟೋರಿಯಂ, ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಟ್ರ್ಸ್ ಸೆಯನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಕೂಳೂರು ಇಲ್ಲಿ ನಡೆಯಿತು.
ಗೌರವಾನ್ವಿತ ಮುಖ್ಯ ಅತಿಥಿ ಡಾ. ಬಿ. ಸಾಯಿ ಗಿರಿಧರ್, ಶ್ರೀ ಸತ್ಯಸಾಯಿ ಉನ್ನತ ಶಿಕ್ಷಣ ಸಂಸ್ಥೆಯ ಮಾಜಿ ಉಪಕುಲಪತಿ, ಪುಟ್ಟಪರ್ತಿ ಅವರು ಸಮಾರಂಭಕ್ಕೆ ಚಾಲನೆಯನ್ನು ನೀಡಿ ಮಾತಾಡಿದರು. ಸ್ವಯಂ ಪ್ರಯತ್ನ ಮತ್ತು ಕೌಶಲ್ಯ ವರ್ಧನೆಯ ಮಹತ್ವವನ್ನು ಅರಿಯುತ್ತಾ ಜೀವನ ವಿಕಾಸ ಹೇಗೆ ಎಂಬುವುದನ್ನುಅವರು ವಿವರಿಸಿ ಹೇಳಿದರು. ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಬೇಕಾದ ಸಮಗ್ರತೆಯ ಅಗತ್ಯವನ್ನು ಮನಗಾಣಿಸಿದರು.
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯಾಣದ ಉದ್ದಕ್ಕೂ ಉನ್ನತವಾದ ನೈತಿಕ ಮಾನದಂಡಗಳನ್ನು ಎತ್ತಿಹಿಡಿಯಲು ಒತ್ತಾಯಿಸಿದರು. ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ ಹೆಚ್ ಅವರು ಪರಿಶ್ರಮ, ಸಮಯಪಾಲನೆ, ಉದ್ಯೋಗ ಹುಡುಕುವ ಎಲ್ಲಾ ಕಾರ್ಯಗಳ ಮಹತ್ವ ಕುರಿತು ಭಾವುಕರಾಗಿ ಮಾತನಾಡಿದರು.
ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಟ್ರ್ಸ್ ಸೆಯನ್ಸ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಮಂಗಳೂರು ಇದರ ಪ್ರಾಂಶುಪಾಲರು ಮತ್ತು ವಿಜ್ಞಾನ ವಿಭಾಗದ ಡೀನ್ ಡಾ.ಅರುಣ್ ಎ. ಭಾಗವತ್ ಅವರು ಅಧ್ಯಕ್ಷೀಯ ಭಾಷಣದಲ್ಲಿ “ಡಿಜಿಟಲ್ ಇಮ್ಮಾರ್ಟಾಲಿಟಿ” ಪರಿಕಲ್ಪನೆಯನ್ನು ಮತ್ತು “ಯು ಟು ಇಂಟರ್ಫೇಸ್” ನ ಮಹತ್ವವನ್ನು ಹೈಲೈಟ್ ಮಾಡಿದರು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಜೀವನದಲ್ಲಿ ಡಿಜಿಟಲ್ ಪ್ರಗತಿಯನ್ನು ಹೇಗೆ ಸ್ವೀಕರಿಸಬೇಕು ಎಂಬ ವಿಚಾರ ಮಂಡನೆ ಮಾಡಿದರು.
ಅಧಿವೇಶನದಲ್ಲಿ ಡಾ. ಶರೀನಾ ಪಿ. ಉಪ ಪ್ರಾಂಶುಪಾಲರು ಮತ್ತು ವಾಣಿಜ್ಯ ಹಾಗೂ ನಿರ್ವಹಣಾ ವಿಭಾಗದ ಡೀನ್, ಡಾ. ಜೀವನ್ ರಾಜ್ ಮತ್ತು ಶ್ರೀ ನಾರಾಯಣ್ ಸುಕುಮಾರ್ ಎ, ಉಪ ಪ್ರಾಂಶುಪಾಲರು ಉಪಸ್ಥಿತರಿದ್ದರು. ಎಂ.ಬಿಎ ವಿಭಾಗದ ಪ್ರಾಧ್ಯಾಪಕಿ ಮತ್ತು ಸ್ನಾತಕೋತ್ತರ ಪದವಿಯ ಸಂಯೋಜಕರಾದ ಡಾ.ನಮ್ರತಾ ಎಸ್. ಅವರು ಕಾರ್ಯಕ್ರಮದ ಯಶಸ್ವಿಗೆ ಸ್ಪಂದಿಸಿದರು.
ಹಾಸ್ಪಿಟಾಲಿಟಿ ಸೈನ್ಸ್‍ನ ಮುಖ್ಯಸ್ಥರಾದ ಶ್ರೀ ಮೆರ್ವಿನ್ ಜೈಸನ್ ವಾಜ್ ಅಥಿತಿಗಳನ್ನು ಪರಿಚಯಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಅಧ್ಯಾಪಕರಾದ ಶ್ರೀ ವಾಸುದೇವ ಶೆಣೈ ಅವರು ಹೃತ್ಪೂರ್ವಕ ಧನ್ಯವಾದವಿತ್ತರು. ಎಂಸಿಎ, ಅಧ್ಯಾಪಕರಾದ ಶ್ರೀಮತಿ ಚೈತ್ರ ಕೊಪ್ಪಳ ಅವರು ಕಾರ್ಯಕ್ರಮ ನಿರ್ವಹಿಸಿದರು.
ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭದಲ್ಲಿ ಸಾಧನೆಯ ನಿಮಿತ್ತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಮತ್ತು ಸಕಾರಾತ್ಮಕ ಬೆಳವಣಿಗೆ ಸಾಧಿಸಲು ಈ ಸಮಾರಂಭ ಪ್ರೇರೇಪಿಸಿತು.
ಹೊಸ ಶೈಕ್ಷಣಿಕ ಅವಧಿ ಮತ್ತು ಸಂಬಂಧಿತ ಚಟುವಟಿಕೆಗಳೊಂದಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರಿಚಿತರಾಗಲು, ಸ್ಥಾಪಿತ ರೂಢಿಗಳು ಮತ್ತು ಮಾನದಂಡಗಳ ಮೂಲಕ ಯಶಸ್ಸಿಗೆ ಚೌಕಟ್ಟನ್ನು ಒದಗಿಸುವುದು. ಬಾಹ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಮುಂದಾಗುವುದು ಕಲಿಕೆಯ ಮುಖ್ಯ ಉದ್ದೇಶವಾಗಿದೆ.
ಎಂ.ಬಿಎ, ಎಂ.ಎಸ್ಸಿ. (ಮೈಕ್ರೊಬಯಾಲಜಿ), ಎಂ.ಎಸ್ಸಿ. (ಆಹಾರ ವಿಜ್ಞಾನ ಮತ್ತು ಪೋಷಣೆ) ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.