ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಆಲಿ ಆತ್ಮಹತ್ಯೆ ಪ್ರಕರಣದ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿದರು.
ನಿನ್ನೆ ಮುಂಜಾನೆ ನದಿಗೆ ಹಾರಿರುವ ಮಾಹಿತಿ ಬಂದಿದೆ. ಆರು ತಂಡ ಸತತವಾಗಿ ಹುಡುಕಾಟ ನಡೆಸಿದೆ. ಬೆಳಗ್ಗೆ ಹತ್ತು ಗಂಟೆಗೆ ಮುಮ್ತಾಜ್ ಮೃತದೇಹ ಪತ್ತೆಯಾಗಿದೆ. ಮುಮ್ತಾಜ್ ಸಹೋದರ ಕಾವೂರು ಠಾಣೆಗೆ ದೂರು ನೀಡಿದ್ದಾರೆ. ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಾವೂರು ಠಾಣೆಯಲ್ಲಿ ಆರು ಜನರ ಮೇಲೆ ಎಫ್ ಐ ಆರ್ ದಾಖಲಿಸಲಾಗಿದೆ.
ದೂರಿನಲ್ಲಿ ಮೂರು ತಿಂಗಳಿನಿಂದ ಖಿನ್ನತೆಯಲ್ಲಿ ಇದ್ದ ಬಗ್ಗೆ ಉಲ್ಲೇಖಿಸಲಾಗಿದೆ. ಹಣ ಕ್ಕಾಗಿ ಪೀಡನೆ,ಬೆದರಿಕೆ ಬಗ್ಗೆ ದೂರು ನೀಡಲಾಗಿದೆ. ಮುಮ್ತಾಜ್ ಆತ್ಮಹತ್ಯೆ ಗೆ ಮುನ್ನ ವಾಯ್ಸ್ ನೋಟ್ ಹಾಕಿರುವ ಬಗ್ಗೆ ಸುದ್ದಿಯಾಗಿದೆ. ಈ ಬಗ್ಗೆ ನಾವು ತನಿಖೆಯನ್ನು ಮಾಡುತ್ತಿದ್ದೇವೆ. ಸೆಕ್ಸ್ ವಿಡಿಯೋ ಆಧಾರದಲ್ಲಿ ಮುಮ್ತಾಜ್ ಗೆ ಬೆದರಿಕೆ ಹಾಕಿರುವ ಬಗ್ಗೆ ದೂರು ಬಂದಿದೆ. ಈ ಬಗ್ಗೆ ತಂಡಗಳನ್ನು ರಚಿಸಿ ಆರೋಪಿಗಳನ್ನು ಹುಡುಕಾಟ ಮಾಡುತ್ತಿದ್ದೇವೆ.
ವಾಯ್ಸ್ ನೋಟ್ ನಲ್ಲಿ ಸತ್ತಾರ್ ಎಂಬುವವನ ಬಗ್ಗೆ ಮುಮ್ತಾಜ್ ಹೇಳಿದ್ದಾರೆ. ರೆಹಮತ್ ಎಂಬ ಮಹಿಳೆಯ ಮೂವತ್ತರಿಂದ ಮೂವತ್ತೆಂಟು ವರ್ಷದ ಒಳಗಿನವಳು. ಆಕೆಯನ್ನು ಪೊಲೀಸ್ ತಂಡ ಹುಡುಕಾಟ ನಡೆಸುತ್ತಿದೆ. ಆತ್ಮಹತ್ಯೆ ಗೆ ಮುನ್ನ ಬಸ್ ಗೆ ಕಾರ್ ಡಿಕ್ಕಿಯಾಗಿದೆ. ಬಸ್ ನವರ ಹೇಳಿಕೆಯನ್ನು ಪಡೆದಿದ್ದೇವೆ. ಆರೋಪಿಗಳು ದೇಶ ಬಿಟ್ಟು ಹೋಗದಂತೆ ಎಲ್ ಒ ಸಿ ಜಾರಿ ಮಾಡಿದ್ದೇವೆ ಎಂದುಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ.