Ad

ಬಜ್ಪೆ: ಗುಲಾಬಿ ಅಜ್ಜಿಯ ಮನೆಗೆ ಭೇಟಿ ನೀಡಿ ಸ್ಪಂಧಿಸಿದ ಶಾಸಕ ಉಮಾನಾಥ್‌ ಕೋಟ್ಯಾನ್

Umanath

ಮಂಗಳೂರು: ಬಜ್ಪೆಯಲ್ಲಿ ವಾಸ್ತವಿರುವ ಗುಲಾಬಿ ಅಜ್ಜಿ ಮತ್ತು ಮನೆಯ ಸ್ಥಿತಿಗತಿಗಳ ಬಗ್ಗೆ ಜೂನ್ 11‌ ರಂದು ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿತ್ತು. ತಕ್ಷಣ ಇದನ್ನು ಕಂಡ ರಾಜೇಶ್ ಅಮೀನ್ ಲೋಕೇಶ್ ಪೂಜಾರಿ ವಿಜಯಕುಮಾರ್ ಕೆಂಜಾರು ಕಾನ, ಗಣೇಶ್ ಪೂಜಾರಿ, ಶಿವರಾಮ ಪೂಜಾರಿ ಇವರುಗಳು ಸ್ಥಳೀಯ ಶಾಸಕರಾದ ಉಮಾನಾಥ್ ಕೋಟ್ಯಾನ್ ಇವರ ಗಮನಕ್ಕೆ ತಂದಿದ್ದಾರೆ.

Ad
300x250 2

ಮರುದಿನ ಬೆಳಿಗ್ಗೆ ಸ್ಥಳಕ್ಕೆ ಮುಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಸ್ಥಳಕ್ಕೆ ದಾವಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿ ಅಜ್ಜಿಯನ್ನು ವೆನ್ಲಾಕ್ ಆಸ್ಪತ್ರೆಗೆ 108 ಆಂಬುಲೆನ್ಸ್ ನಲ್ಲಿ ಹೋಗಿ ದಾಖಲು ಮಾಡಿ ಸರಿಯಾದ ಚಿಕಿತ್ಸೆಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ವೈದ್ಯರುಗಳಿಗೆ ಸೂಚನೆ ಕೊಟ್ಟು ವ್ಯವಸ್ಥೆಯನ್ನು ಶಾಸಕರು ಮಾಡಿರುತ್ತಾರೆ.

ಈ ಸಂದರ್ಭದಲ್ಲಿ ಬಿಜೆಪಿ ಮುಲ್ಕಿ ಮೂಡಿಬಿದರೆ ರೈತ ಮೋರ್ಚಾ ಅಧ್ಯಕ್ಷರಾದ ರಾಜೇಶ್ ಅಮೀನ್ (RK), ಬಿಜೆಪಿ ಪ್ರಮುಖರಾದ ಲೋಕೇಶ್ ಪೂಜಾರಿ ಬಜ್ಪೆ, ರಿತೇಶ್ ಶೆಟ್ಟಿ, ವಿಜಯಕುಮಾರ್ ಕೆಂಜಾರು ಕಾನ ಅಧ್ಯಕ್ಷರು ಬಜ್ಪೆ ಮಹಾಶಕ್ತಿ ಕೇಂದ್ರ, ಶಿವರಾಮ ಪೂಜಾರಿ, ಗಣೇಶ್ ಬಜ್ಪೆ, ದಿನೇಶ್ ಕೆ ಬಂಗೇರ, ಬಜ್ಪೆ ಪೊಲೀಸ್ ಅಧಿಕಾರಿಗಳು,ಹಾಗೂ ಸಿಬ್ಬಂದಿ ವರ್ಗ ಬಜಪೆ ಪಟ್ಟಣ ಪಂಚಾಯತ್ ಇಂಜಿನಿಯರ್ ನಳಿನ್ ಕುಮಾರ್ ಮತ್ತು ಬಾಲಕೃಷ್ಣ ಕತ್ತಲ್ ಸಾರ್,ಸಿರಾಜ್ ಬಜ್ಪೆ, ಫಯಾಜ್, ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಸೂಪರ್ವೈಸರ್ ಅರುಣಾ ಸಾಲ್ಯಾನ್ ಮತ್ತು ಸದಸ್ಯರು ಕಿರಣ್ ಅತ್ತೋಲಿಗೆ, ಯಶೋಧರ್ ಪೂಜಾರಿ, ಆಶಾ ಕಾರ್ಯಕರ್ತರು ಅಕ್ಷಿತ್ ಪೂಜಾರಿ, ನಿರಂಜನ್ ಕರ್ಕೇರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad