ಮಂಗಳೂರು: ಮುಂಬೈನಲ್ಲಿ ನಡೆದ ಪುರುಷರ ಸೀನಿಯರ್ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಧನರಾಜ್ ಗಾಣಿಗ ಅವರು ಐಬಿಬಿಎಫ್ಎಫ್ ಆಕ್ಟಿವ್ ಫಿಟ್ ಐಎಫ್ಬಿಬಿ ಮಿಸ್ಟರ್ ಯೂನಿವರ್ಸ್ 2024ರ ಇಂಡಿಯಾ ಚಾಂಪಿಯನ್ ಆಫ್ ಚಾಂಪಿಯನ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಜೀಯಸ್ ಫಿಟ್ನೆಸ್ ಕ್ಲಬ್ನಲ್ಲಿ ತರಬೇತಿ ಪಡೆಯುತ್ತಿರುವ ಮಂಗಳೂರು ಮೂಲದ ಗಾಣಿಗ ಈಗ ಐಎಫ್ಬಿಬಿ ಪ್ರೊ ಕಾರ್ಡ್ ಹೊಂದಿದ್ದು, ಸ್ಪೇನ್ನಲ್ಲಿ ನಡೆಯಲಿರುವ ಪ್ರತಿಷ್ಠಿತ ಅರ್ನಾಲ್ಡ್ ಕ್ಲಾಸಿಕ್ 2025ಕ್ಕೆ ಅರ್ಹತೆ ಪಡೆದಿದ್ದಾರೆ. ಶಮಂತ್ ಶೆಟ್ಟಿ ಅವರ ಬಳಿ ತರಬೇತಿ ಪಡೆಯುತ್ತಿರುವ ಅವರು 13 ವರ್ಷಗಳಿಂದ ಬಾಡಿಬಿಲ್ಡಿಂಗ್ ಅಭ್ಯಾಸ ಮಾಡಿದ್ದಾರೆ.
ಧನರಾಜ್ ಗಾಣಿಗ ಅವರ ಅಂತಾರಾಷ್ಟ್ರೀಯ ಸಾಧನೆಯನ್ನು ಗುರುತಿಸಿ ಜೀಯಸ್ ಫಿಟ್ನೆಸ್ ಕ್ಲಬ್ ವತಿಯಿಂದ ಇಂದು ಧನರಾಜ್ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜೀಯಸ್ ಫಿಟ್ನೆಸ್ ಕ್ಲಬ್ ಮಾಲೀಕ ರಾಜೇಶ್ ಪಾಟಾಳಿ, ತರಬೇತುದಾರ ಶಿವಾನಂದ್, ಶಮಂತ್ ಶೆಟ್ಟಿ, ಕಬೀರ್ ಶೇಖ್, ಉದ್ಯಮಿ ಪೃಥ್ವಿ ಆಳ್ವ, ತರಬೇತುದಾರ ರೋಶನ್ ಬೆಂಗ್ರೆ, ಅಶ್ವಥ್ ಕರ್ಕೇರ ಉಪಸ್ಥಿತರಿದ್ದರು.