Bengaluru 22°C
Ad

ಅಪ್ರಾಪ್ತ ಬಾಲಕಿ ಅತ್ಯಾಚಾರ ಕೇಸ್‌: ಆರೋಪಿಯನ್ನ ಬಂಧಿಸಿದ ಪೋಕ್ಸೋ ನ್ಯಾಯಾಲಯ

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ಪೋಕ್ಸೋ ನ್ಯಾಯಾಲಯ ಬೆಳ್ತಂಗಡಿಯ ಮಡಂತ್ಯಾರು ಬಳಿ ಇರುವ ಮಾರಿಗುಡಿ ಎಂಬಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಎರಡನೇ ವಿಶೇಷ ಪೋಕ್ಸೋ ಹೆಚ್ಚುವರಿ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ ಪೋಕ್ಸೋ ನ್ಯಾಯಾಲಯ ಬೆಳ್ತಂಗಡಿಯ ಮಡಂತ್ಯಾರು ಬಳಿ ಇರುವ ಮಾರಿಗುಡಿ ಎಂಬಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮಾಡಿದ್ದ ಆರೋಪಿಯನ್ನು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ಎರಡನೇ ವಿಶೇಷ ಪೋಕ್ಸೋ ಹೆಚ್ಚುವರಿ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ.

ಎರಡನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಗೌರವಾನ್ವಿತ ಮನು ಕೆ. ಎಸ್. ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. 2023ರ ಜೂನ್‌ 23ರಂದು ಬಾಲಕಿಯನ್ನು ಆರೋಪಿಯು ಹುಟ್ಟು ಹಬ್ಬದ ನೆಪದಲ್ಲಿ ತಮ್ಮ ಬೆಳ್ತಂಗಡಿಯ ಮಡಂತ್ಯಾರಿನಲ್ಲಿ ಇರುವ ತನ್ನ ಸಹೋದರನ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ನಾಗೇಶ್ ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ನ್ಯಾಯಾಲಯ ಒಟ್ಟು 12 ಸಾಕ್ಷಿಗಳನ್ನು ವಿಚಾರಣೆ ಮಾಢಿತ್ತು. ಈ ಪ್ರಕರಣದಲ್ಲಿ 24 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಆರೋಪಿಯ ಪರವಾಗಿ ಆದಾಯ ತೆರಿಗೆಯ ವಿಶೇಷ ಅಭಿಯೋಜಕರೂ ಆಗಿರುವ ಹಿರಿಯ ನ್ಯಾಯವಾದಿ ಹರ್ಷ ಕುಮಾರ್ ಅವರು ವಾದ ಮಂಡಿಸಿದ್ದಾರೆ.

Ad
Ad
Nk Channel Final 21 09 2023