ಮಂಗಳಗಂಗೋತ್ರಿ: ಮಂಗಳೂರು ವಿವಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾಧ್ಯಮ ಸಂಶೋಧನೆ ವಿಧಾನಗಳ ಕುರಿತು ಒಂದು ದಿನದ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಮಧುರೈ ಕಾಮರಾಜ್ ವಿವಿ ಸಂವಹನ ಮತ್ತು ಪತ್ರಿಕೋದ್ಯಮ ಪ್ರಾಧ್ಯಾಪಕ ಪ್ರೊ. ಜಿ ಬಾಲಸುಭ್ರಮಣ್ಯನ ಅವರು ಮಾಧ್ಯಮ ಸಂಶೋಧನೆಯ ವಿವಿಧ ಹಂತಗಳ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಅವರು ವಿಜ್ಞಾನ ಮತ್ತು ಸಮಾಜ ವಿಜ್ಞಾನ ಸಂಶೋಧನೆಗಳ ವ್ಯತ್ಯಾಸ ಹಾಗೂ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಅಧ್ಯಕ್ಷ ಪ್ರೊ ಉಮೇಶ್ಚಂದ್ರ ಎಂ ಪಿ ವಂದಿಸಿದರು. ವಿಭಾಗದ ಅತಿಥಿ ಉಪನ್ಯಾಸಕರಾದ ಮಂಜಪ್ಪ ದ್ಯಾ ಗೋಣಿ, ವಿಷ್ಣುಧರನ್ ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿನಿ ಶ್ರೀಮತಿ ಫಾತಿಮಾ ಶಾಲೂಲ ನಿರೂಪಿಸಿದರು.
Ad