ಮಂಗಳೂರು: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಜಾರಿಯೊ ಸುದ್ದಿಗೋಷ್ಟಿ ನಡೆಸಿದರು.
ಕೋರ್ಟ್ ಆರೋಪಿಯನ್ನು ಜೈಲಿಗೆ ಹಾಕಿದ್ದರೂ ಯಾಕೆ ಆಸ್ಪತ್ರೆಯಲ್ಲಿ ಇರಿಸಿದ್ದಾರೆ. ಆಸ್ಪತ್ರೆಯಲ್ಲಿ ಮಲಗುವಷ್ಟು ಪ್ರಾಣಾಪಾಯ ಇರುವ ಕಾಯಿಲೆ ಆತನಿಗೇನಿದೆ ?. ಅನಿಲ್ ಲೋಬೊ ಹೆಲ್ತ್ ಕಂಡಿಶನ್, ಅನಾರೋಗ್ಯದ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ ಎಂದರು.
ಕೋರ್ಟಿಗೆ ಕೊಟ್ಟಿರುವ ದಾಖಲೆಯಲ್ಲಿ ಪ್ರಾಣಾಪಾಯ ಇರುವ ಬಗ್ಗೆ ಮಾಹಿತಿ ಇಲ್ಲ. ಮೃತ ಮನೋಹರ್ ಪಿರೇರಾ ಅವರಿಂದ ಖಾಲಿ ಚೆಕ್ ಪಡೆದು ಹಣ ಡ್ರಾ ಮಾಡಿದ್ದಾರೆ. ಮನೋಹರ್ ಪಿರೇರಾ ಉಪಸ್ಥಿತಿ ಇಲ್ಲದೆ ಸೆಲ್ಫ್ ಚೆಕ್ ಡ್ರಾ ಮಾಡಿದ್ದು ಹೇಗೆ ?. ಚಾರಿಟಿ ಸಂಸ್ಥೆ ಕೊಟ್ಟ ಹಣವನ್ನು ಅನಿಲ್ ಲೋಬೊ ಡ್ರಾ ಮಾಡಿದ್ದಾನೆ.
ಅನಿಲ್ ಲೋಬೊ ಬಗ್ಗೆ ಅನೇಕ ಅವ್ಯವಹಾರದ ಆರೋಪಗಳಿದ್ದು ಸಮಗ್ರ ತನಿಖೆ ಮಾಡಬೇಕು. ಸಹಕಾರಿ ಇಲಾಖೆ ಅಧಿಕಾರಿಗಳು ಅನಿಲ್ ಲೋಬೊ ಜೊತೆಗೆ ಶಾಮೀಲಾಗಿದ್ದಾರೆ. ಲೋಬೊಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಯಬೇಕು ಎಂದು ಮಂಗಳೂರಿನಲ್ಲಿ ರಾಬರ್ಟ್ ರೊಜಾರಿಯೋ ಆಗ್ರಹ ಮಾಡಿದ್ದಾರೆ.