Bengaluru 20°C
Ad

ನಿಟ್ಟೆ ಕಾಲೇಜಿನಲ್ಲಿ ಎಂಸಿಎ ಎಕ್ಸಪ್ರೋ 2024 ಕಾರ್ಯಕ್ರಮದ ಉದ್ಘಾಟನೆ

ಕೃತಕ ಬುದ್ಧಿಮತ್ತೆಯು ನಮ್ಮ ಉದ್ಯೋಗವನ್ನು ಕಸಿದುಕೊಳ್ಳುವುದಿಲ್ಲ, ಬದಲಿಗೆ ಅದನ್ನು ಕಲಿಯುವುದರಿಂದ ನಮ್ಮ ಕೆಲಸವನ್ನು ಇನ್ನೂ ಉತ್ತಮವಾಗಿ ಸುಲಭವಾಗಿಸಬಹುದೆಂದರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ಗೋಪಾಲ್ ಮುಗೆರಾಯ ಅಭಿಪ್ರಾಯಪಟ್ಟರು.

ನಿಟ್ಟೆ: ಕೃತಕ ಬುದ್ಧಿಮತ್ತೆಯು ನಮ್ಮ ಉದ್ಯೋಗವನ್ನು ಕಸಿದುಕೊಳ್ಳುವುದಿಲ್ಲ, ಬದಲಿಗೆ ಅದನ್ನು ಕಲಿಯುವುದರಿಂದ ನಮ್ಮ ಕೆಲಸವನ್ನು ಇನ್ನೂ ಉತ್ತಮವಾಗಿ ಸುಲಭವಾಗಿಸಬಹುದೆಂದರು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ಗೋಪಾಲ್ ಮುಗೆರಾಯ ಅಭಿಪ್ರಾಯಪಟ್ಟರು.

Ad

ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗವು ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ – ‘ವೆನಮಿತಾ’ದ ಸಹಯೋಗದೊಂದಿಗೆ ಆಯೋಜಿಸಿದ್ದ ಎಂಸಿಎ ಎಕ್ಸ್ಪ್ರೋ -24 ನ್ನು ನ.25 ರಂದು ಉದ್ಘಾಟಿಸಿ ಮಾತನಾಡಿದರು.

Ad

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆಯ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಅವರು ವಿದ್ಯಾರ್ಥಿಗಳು ಪ್ರಾಜೆಕ್ಟ್ ನ್ನು ಮಾಡುವ ಅಗತ್ಯತೆ ಮತ್ತು ಅದರಿಂದ ಆಗುವ ಪ್ರಯೋಜನವನ್ನು ತಿಳಿಸಿದರು.

Ad

ಎಂಸಿಎ ವಿಭಾಗದ ಹಳೆವಿದ್ಯಾರ್ಥಿಗಳಾಗಿದ್ದು ಕಾರ್ಯಕ್ರಮಕ್ಕೆ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಟೈಟೊ ಎವ್ರಿ ಇಂಡಿಯಾದಲ್ಲಿ ಟೀಮ್ ಲೀಡ್ ಹಾಗೂ ರಚನಾ ಮಿಥುನ್, ಬೆಂಗಳೂರಿನ ಐ ಡ್ರೈವ್ ನಲ್ಲಿ ಪ್ರೋಗ್ರಾಂ ಎನಾಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಹೆರೋಲಿನ್ ವಾಝ್,

Ad

ರೋಬೋಸಾಫ್ಟ್ ಟೆಕ್ನಾಲಜೀಸ್ ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಝೀಟಾ ಅಂದ್ರಾದೆ, ಮಂಗಳೂರಿನ ಸ್ಕೈಲ್ರಾ ಕಂಪೆನಿಯಲ್ಲಿ ಅಸೋಸಿಯೇಟ್ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವಂತಹ ಪ್ರಣೀತ ಜೆ. ಶೆಟ್ಟಿ, ಬೆಂಗಳೂರಿನ ಪೇಚೆಕ್ಸ್ ನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಡೆನ್ಸನ್ ಮಸ್ಕರೇನಸ್ ಅವರು ಮಾತನಾಡಿ ವಿದ್ಯಾರ್ಥಿಗಳು ಐಟಿ ಉದ್ಯೋಗ ಪಡೆಯಲು ತಮ್ಮನ್ನು ತಾವು ಯಾವ ರೀತಿ ಅಣಿಗೊಳಿಸಬೇಕೆಂದು ಸಲಹೆ ಸೂಚನೆ ನೀಡಿದರು.

Ad

ಇನ್ಫಾ ರ್ಮೇಶನ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪ್ರೊಫೆಸರ್ ಡಾ. ಕರುಣಾ ಪಂಡಿತ್ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪ್ರೊಫೆಸರ್ ಡಾ. ಸಾರಿಕಾ ಹೆಗ್ಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Ad

ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಬಲಿಪ ಸ್ವಾಗತಿಸಿದರು. ವಿಭಾಗದ ಪ್ರಾಜೆಕ್ಟ್ ಕೋರ್ಡಿನೇಟರ್ ಡಾ. ಸ್ಪೂರ್ತಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ವಿಶ್ವರೂಪ ಕಾರ್ಯಕ್ರಮ ನಿರೂಪಿಸಿದರು. 56 ಪ್ರಾಜೆಕ್ಟ್ ಈ ಪ್ರದರ್ಶನದಲ್ಲಿ ಪಾಲ್ಗೊಂಡವು.

Ad
Ad
Ad
Nk Channel Final 21 09 2023