Bengaluru 23°C
Ad

ಪಡೀಲ್, ಪಣಂಬೂರು ಪಂಪ್ ಹೌಸ್‌ಗೆ ಮೇಯರ್ ದಿಢೀರ್ ಭೇಟಿ

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅವರು ಮಂಗಳವಾರ ರಾತ್ರಿ 12.30ರ ಸುಮಾರಿಗೆ ಪಂಪ್ ಹೌಸ್ ಗಳಿಗೆ ದಿಢೀರ್ ಭೇಟಿ ನೀಡಿದರು. ಪಡೀಲ್ ಹಾಗೂ ಪಣಂಬೂರು ಪಂಪ್ ಹೌಸ್ ಗಳಲ್ಲಿ ಇರುವ ದಾಖಲೆ ಪರಿಶೀಲಿಸಿದರು.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅವರು ಮಂಗಳವಾರ ರಾತ್ರಿ 12.30ರ ಸುಮಾರಿಗೆ ಪಂಪ್ ಹೌಸ್ ಗಳಿಗೆ ದಿಢೀರ್ ಭೇಟಿ ನೀಡಿದರು. ಪಡೀಲ್ ಹಾಗೂ ಪಣಂಬೂರು ಪಂಪ್ ಹೌಸ್ ಗಳಲ್ಲಿ ಇರುವ ದಾಖಲೆ ಪರಿಶೀಲಿಸಿದರು.

Ad

ಅಲ್ಲಿನ ರೆಕಾರ್ಡ್ ಗಳನ್ನು‌ ಸರಿಯಾಗಿ ನಿರ್ವಹಣೆ ಮಾಡುವ ಬಗ್ಗೆ ಗಮನಿಸಿದರು. ಸೌಲಭ್ಯ, ಹಾಗೂ ನೀರು ಪೂರೈಕೆಯ ಸೌಲಭ್ಯ,ನೀರು ಶುದ್ದೀಕರಣದ ಘಟಕ ಪರಿಶೀಲಿಸಿದರು. ಪಂಪ್ ಗಳು ಸುಸ್ಥಿಯಲ್ಲಿ ಇಟ್ಟುಕೊಳ್ಳುವ ಮೂಲಕ ನೀರು ಪೂರೈಕೆಗೆ ತೊಂದರೆಯಾಗದಂತೆ ಗಮನಿಸುತ್ತಿರಬೇಕು.ಯಾವುದೇ ಸಮಸ್ಯೆ ಎದುರಾದರೂ ಗಮನಕ್ಕೆ ತನ್ನಿ ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.

Ad
Ad
Ad
Nk Channel Final 21 09 2023