ಮಂಗಳೂರು: 37 ಸೆಕೆಂಡ್ನಲ್ಲಿ ನೀರೊಳಗೆ 26 ಪಲ್ಟಿಹೊಡೆದು ಮಂಗಳೂರಿನ ಬಾಲಕನೋರ್ವ ವಿಶ್ವ ದಾಖಲೆ ಬರೆದಿದ್ದಾನೆ. ಮಂಗಳೂರಿಗೆ ಇದೊಂದು ಹೆಮ್ಮೆಯ ವಿಚಾರ. 13 ವರ್ಷದ ಬಾಲಕ ಹ್ಯಾಡ್ರಿಯನ್ ವೇಗಸ್ ಈ ದಾಖಲೆ ನಿರ್ಮಿಸಿದ ಪೋರ. ಈತನ ಈ ಸಾಹಸ ಕಂಡು ನೆರೆದವರೆಲ್ಲರೂ ಚಕಿತರಾಗಿದ್ದಾರೆ. ಘಟಾನುಘಟಿ ಈಜು ಪಟುಗಳಿಗೂ ಸಾಧ್ಯವಾಗದ ಸಾಧನೆಯನ್ನ 13 ವರ್ಷದ ಬಾಲಕ ಸಾಧಿಸಿ ಹೊಸ ಇತಿಹಾಸ ಸೃಷ್ಟಿಸಿದ್ದಾನೆ. ಈತನ ಈ ಸಾಧನೆಗೆ ಇಂದು ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜು ಕೊಳ ಸಾಕ್ಷಿಯಾಗಿತ್ತು.
ಈಜುಕೊಳದ ನೀರೊಳಗೆ ಉಸಿರು ಬಿಗಿಹಿಡಿದು 37 ಸೆಕೆಂಡ್ಸ್‌ಗಳಲ್ಲಿ 26 ಸೋಮರ್‌ಸಾಲ್ಟ್ಸ್ ಅಂದ್ರೆ ಪಲ್ಟಿ ಹೊಡೆಯುವ ಮೂಲಕ ಹ್ಯಾಡ್ರಿಯನ್ ವೇಗಸ್ ನೊಬೆಲ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ. 15 ವರ್ಷದೊಳಗೆ ಈ ನೀರೊಳಗಿನ ಪಲ್ಟಿ ಸಾಹಸ ಇದೇ ಪ್ರಥಮ ದಾಖಲೆಯಾಗಿದೆ.
Ad