Bengaluru 28°C
Ad

76 ವರ್ಷಗಳಿಂದ ರಾಷ್ಟ್ರಪಿತನಿಗೆ ನಿತ್ಯಪೂಜೆ ಸಲ್ಲಿಸುವ ಮಂಗಳೂರಿನ ಅಪರೂಪದ ಗುಡಿ

ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಗುಡಿ ಕಟ್ಟಿ ನಿತ್ಯಪೂಜೆ ಸಲ್ಲಿಸುವ ಕ್ಷೇತ್ರವಾಗಿ ಮಂಗಳೂರಿನ ಕಂಕನಾಡಿ ಶ್ರೀಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಗುರುತಿಸಿಕೊಂಡಿದೆ. ಪ್ರತಿವರ್ಷ ಅ.2ರ ಗಾಂಧಿ ಜಯಂತಿಯಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ಮಹಾತ್ಮನ ಜನ್ಮದಿನದಂದೇ ರಾತ್ರಿ ಶ್ರೀಗಣಪತಿ ದೇವರ ವಿಗ್ರಹ ಹಾಗೂ ಬ್ರಹ್ಮಬೈದರ್ಕಳ ಮೂರ್ತಿಗೆ ಪಲ್ಲಕಿ ಉತ್ಸವ ನಡೆಯುವುದು ಇಲ್ಲಿನ ಮತ್ತೊಂದು ವಿಶೇಷ. ಜಯಂತಿ ಅಂಗವಾಗಿ ಗುಡಿಯನ್ನು ಹೂವುಗಳಿಂದ ಅಲಂಕರಿಸಲಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ಗಾಂಧಿ ಪ್ರತಿಮೆಗೆ ವಿಶೇಷ ಅರ್ಚನೆ ನಡೆಯುತ್ತದೆ.

ಮಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಗುಡಿ ಕಟ್ಟಿ ನಿತ್ಯಪೂಜೆ ಸಲ್ಲಿಸುವ ಕ್ಷೇತ್ರವಾಗಿ ಮಂಗಳೂರಿನ ಕಂಕನಾಡಿ ಶ್ರೀಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಗುರುತಿಸಿಕೊಂಡಿದೆ. ಪ್ರತಿವರ್ಷ ಅ.2ರ ಗಾಂಧಿ ಜಯಂತಿಯಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.ಮಹಾತ್ಮನ ಜನ್ಮದಿನದಂದೇ ರಾತ್ರಿ ಶ್ರೀಗಣಪತಿ ದೇವರ ವಿಗ್ರಹ ಹಾಗೂ ಬ್ರಹ್ಮಬೈದರ್ಕಳ ಮೂರ್ತಿಗೆ ಪಲ್ಲಕಿ ಉತ್ಸವ ನಡೆಯುವುದು ಇಲ್ಲಿನ ಮತ್ತೊಂದು ವಿಶೇಷ. ಜಯಂತಿ ಅಂಗವಾಗಿ ಗುಡಿಯನ್ನು ಹೂವುಗಳಿಂದ ಅಲಂಕರಿಸಲಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ಗಾಂಧಿ ಪ್ರತಿಮೆಗೆ ವಿಶೇಷ ಅರ್ಚನೆ ನಡೆಯುತ್ತದೆ.

ರಾತ್ರಿ 7.30ಕ್ಕೆ ಗಾಂಧಿ ಪ್ರತಿಮೆ ಎದುರು ಗಣಪತಿ ಮತ್ತು ಬ್ರಹ್ಮಬೈದರ್ಕಳ ಮೂರ್ತಿಯನ್ನು ಫಲವಸ್ತುಗಳ ಸಹಿತ ಪಲ್ಲಕಿಯಲ್ಲಿ ಗಾಂಧಿ ಗುಡಿಯ ಮುಂದೆ ತಂದು ಆರತಿ ಸೇವೆ ಮಾಡಲಾಗುತ್ತದೆ. ಪ್ರತಿವರ್ಷ ಗಾಂಧಿ ಜಯಂತಿ ಸಹಿತ ರಾಷ್ಟ್ರೀಯ ಉತ್ಸವಗಳಂದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ ಎನ್ನುತ್ತಾರೆ ಶ್ರೀಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರು.

1948ರಲ್ಲಿ ಸ್ಥಾಪನೆ:

1948ರ ಡಿ.15ರಂದು ಗರಡಿ ಕ್ಷೇತ್ರದ ಬಲಬದಿಯ ಮೂಲೆಯಲ್ಲಿ ಗಾಂಧೀಜಿಯ ಮಣ್ಣಿನ ಮೂರ್ತಿ ನಿರ್ಮಿಸಲಾಗಿತ್ತು. ನಂತರ ಎಡ ಬದಿಯ ಪ್ರವೇಶದಲ್ಲೇ ನಾರಾಯಣಗುರುಗಳ ಗುಡಿ ಪಕ್ಕದಲ್ಲೇ ಗಾಂಧಿಯ ಅಮೃತಶಿಲೆಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ದೇವಳಕ್ಕೆ ಬರುವ ಭಕ್ತರು ಗುರುಗಳಿಗೆ ಪೂಜೆ ಸಲ್ಲಿಸಿ ಮುಂದೆ ಸಾಗಲಿ ಎಂಬುದು ಇದರ ಉದ್ದೇಶ.

ಸತ್ಯ, ಶಾಂತಿ, ಅಹಿಂಸೆ ಮತ್ತು ತ್ಯಾಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು, ಜಗತ್ತಿಗೆ ಅಹಿಂಸೆಯ ತತ್ವ ಸಾರಿ, ಹುತಾತ್ಮರಾಗಿರುವ ಮಹಾತ್ಮ ಗಾಂಧೀಜಿ ತತ್ವಗಳು ಮುಂದಿನ ಪೀಳಿಗೆಗೆ ತಿಳಿಯಲಿ ಎಂಬ ಉದ್ದೇಶದಿಂದ ಐದು ಗ್ರಾಮದ ಮುಖ್ಯಸ್ಥರಾಗಿದ್ದ ಗಾಂಧಿವಾದಿ ನರ್ಸಪ್ಪ ಸಾಲ್ಯಾನ್‌, ಸೋಮಪ್ಪ ಪಂಡಿತ್‌ ಮತ್ತು ವೆಂಕಪ್ಪ ಅವರು ಗಾಂಧಿ ಗುಡಿ ಸ್ಥಾಪಿಸಿದ್ದರು.

ತ್ರಿಕಾಲ ಪೂಜೆ:

ಇಲ್ಲಿ ದೈವ ದೇವರಂತೆ ಗಾಂಧಿ ಪ್ರತಿಮೆಗೂ ಪ್ರತಿನಿತ್ಯ ಮೂರು ಹೊತ್ತು ಆರತಿ ಸಹಿತ ಪೂಜೆ ಮತ್ತು ಒಂದು ಕುಡ್ತೆ ಹಾಲು ಮತ್ತು ಎರಡು ಬಾಳೆ ಹಣ್ಣಿನ ನೈವೇದ್ಯ ಅರ್ಪಣೆ ಮಾಡಲಾಗುತ್ತಿದೆ. ಇದು 76 ವರ್ಷಗಳಿಂದಲೂ ನಿತ್ಯ ನಡೆದುಕೊಂಡು ಬರುತ್ತಿದೆ.

ಗಾಂಧೀಜಿ ಮೂರು ಬಾರಿ ಮಂಗಳೂರಿಗೆ ಆಗಮಿಸಿ, ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ್ದರು. ಅವರ ಅಹಿಂಸಾ ತತ್ವದ ಆದರ್ಶದ ಆರಾಧನೆ ಇಲ್ಲಿ ನಡೆಯುತ್ತಿದೆ. ಇದು ಸ್ಥಳೀಯ ಯುವಕರಿಗೂ ಸ್ಫೂರ್ತಿಯಾಗಿದ್ದು, ಗಾಂಧಿ ಚಿಂತನೆಯಂತೆ ಕ್ಷೇತ್ರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ.

Ad
Ad
Nk Channel Final 21 09 2023