Ad

ಮಂಗಳೂರು: ಕಟ್ಟಡ ಕಾಮಗಾರಿ ಕಂಟ್ರಾಕ್ಟರ್, ಸೂಪರ್ವೈಸರ್ಸ್ ವಿರುದ್ಧ ಎಫ್ಐಆರ್

Fir

ಮಂಗಳೂರು: ರೋಹನ್ ಕಾರ್ಪೋರೇಶನ್ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಟ್ಟಡ ಕಾಮಗಾರಿ ಕಂಟ್ರಾಕ್ಟರ್, ಸೂಪರ್ವೈಸರ್ಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

Ad
300x250 2

ಒಟ್ಟು ಮೂವರ ವಿರುದ್ಧಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಾಮಗಾರಿ ಸ್ಥಳದ ಮುಖ್ಯಸ್ಥ ಸಂತೋಷ್ ಹಾಗು ಹರ್ಷವರ್ಧನ್ ಮತ್ತು ಸೈಟ್ ಇಂಚಾರ್ಜ್ ನಾಗರಾಜ್ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ 105 ,125 a ,125 B ಯಡಿ ಕೇಸ್‌ ದಾಖಲಾಗಿದ್ದು, ಬದುಕುಳಿದ ಕಾರ್ಮಿಕ ಬಿಹಾರ ಮೂಲದ ಕಾರ್ಮಿಕ ರಾಜಕುಮಾರ್ ದೂರಿನ ಆಧಾರದ ಮೇಲೆ ಎಫ್ ಐ ಆರ್ ದಾಖಲಾಗಿದೆ.

ಪೊಲೀಸರು ಲೇಬರ್ ಕಂಟ್ರಾಕ್ಟರ್ ವೇಣುಗೋಪಾಲ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಜುಲೈ 3 ರಂದು ಮಂಗಳೂರಿನ ಬಲ್ಮಠ ಸಮೀಪ ನಡೆದಿದ್ದ ಘಟನೆ ನಡೆದಿತ್ತು.

Ad
Ad
Nk Channel Final 21 09 2023
Ad