Bengaluru 24°C
Ad

ಮಂಗಳೂರು ಕೆಎಸ್‍ಆರ್​ಟಿಸಿ ದಸರಾ ಪ್ಯಾಕೇಜ್: ಇತರ ದೇಗುಲಗಳಿಗೂ ವಿಶೇಷ ಬಸ್​

ಕೆಎಸ್‍ಆರ್​ಟಿಸಿ ಮಂಗಳೂರು ವಿಭಾಗದ ವತಿಯಿಂದ ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆದಿದ್ದ 'ನವರಾತ್ರಿ ನವದುರ್ಗೆಯರ ದರ್ಶನ' ಸೇರಿದಂತೆ ಟೂರ್ ಪ್ಯಾಕೇಜ್​ಗಳು ಮತ್ತೆ ಬಂದಿವೆ. ದಸರಾ ಪ್ರಯುಕ್ತ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕಾಗಿ ಅಕ್ಟೋಬರ್ 3ರಿಂದ 12ರ ವರೆಗೆ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಮಂಗಳೂರು-ಮುರುಡೇಶ್ವರ ನಡುವೆ ವಿಶೇಷ ಪ್ಯಾಕೇಜ್ ಕಲ್ಪಿಸಲಾಗುತ್ತಿದೆ.

ಮಂಗಳೂರು: ಕೆಎಸ್‍ಆರ್​ಟಿಸಿ ಮಂಗಳೂರು ವಿಭಾಗದ ವತಿಯಿಂದ ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ನಡೆದಿದ್ದ ‘ನವರಾತ್ರಿ ನವದುರ್ಗೆಯರ ದರ್ಶನ’ ಸೇರಿದಂತೆ ಟೂರ್ ಪ್ಯಾಕೇಜ್​ಗಳು ಮತ್ತೆ ಬಂದಿವೆ. ದಸರಾ ಪ್ರಯುಕ್ತ ಮಂಗಳೂರಿನ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕಾಗಿ ಅಕ್ಟೋಬರ್ 3ರಿಂದ 12ರ ವರೆಗೆ ಮಂಗಳೂರು-ಮಡಿಕೇರಿ, ಮಂಗಳೂರು-ಕೊಲ್ಲೂರು, ಮಂಗಳೂರು-ಮುರುಡೇಶ್ವರ ನಡುವೆ ವಿಶೇಷ ಪ್ಯಾಕೇಜ್ ಕಲ್ಪಿಸಲಾಗುತ್ತಿದೆ.

ಮಂಗಳೂರು ಬಸ್​​ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಟು ಮಂಗಳಾದೇವಿ ದೇವಸ್ಥಾನ-ಸುಂಕದಕಟ್ಟೆ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ-ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ-ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ-(ಮಧ್ಯಾಹ್ನದ ಊಟ)-ಸಸಿಹಿತ್ಲು ಭಗವತಿ ದೇವಸ್ಥಾನ ಹಾಗೂ ಬೀಚ್-ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ-ಉರ್ವ ಮಾರಿಯಮ್ಮ ದೇವಸ್ಥಾನ (ಸಂಜೆ ಉಪಹಾರ)-ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಮೂಲಕ ನವದುರ್ಗಾ ದರ್ಶನದ ಬಸ್​ ರಾತ್ರಿ 8ಗಂಟೆಗೆ ಮಂಗಳೂರು ನಿಲ್ದಾಣಕ್ಕೆ ಹಿಂದಿರುಗಲಿದೆ. ಪ್ರಯಾಣ ದರವು (ಊಟ, ಉಪಹಾರ ಹೊರತುಪಡಿಸಿ) ವಯಸ್ಕರಿಗೆ 400 ರೂ. ಹಾಗೂ ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) 300 ರೂ. ಇರಲಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈ ಮೇಲಿನ ಸಾರಿಗೆಗಳಿಗೆ https://www.ksrtc.in ನಲ್ಲಿ ಮುಂಗಡ ಆಸನ ಕಾಯ್ದಿರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಅಲ್ಲದೆ ಮಡಿಕೇರಿ ಟೂರ್ ಪ್ಯಾಕೇಜ್, ಮಂಗಳೂರು-ಕೊಲ್ಲೂರು ಟೂರ್ ಪ್ಯಾಕೇಜ್ ಹಾಗೆಯೇ ಮಂಗಳೂರು-ಮುರುಡೇಶ್ವರ ಟೂರ್ ಪ್ಯಾಕೇಜ್ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7760990702, 7760990711, ಮಂಗಳೂರು-1ನೇ ಘಟಕ ವ್ಯವಸ್ಥಾಪಕರು, ದೂರವಾಣಿ ಸಂಖ್ಯೆ: 7760990713, ಮಂಗಳೂರು-3ನೇ ಘಟಕ ವ್ಯವಸ್ಥಾಪಕರು, ದೂರವಾಣಿ ಸಂಖ್ಯೆ: 7760990723, ಮಂಗಳೂರು ಮುಂಗಡ ಬುಕ್ಕಿಂಗ್ ಕೌಂಟರ್, ದೂರವಾಣಿ ಸಂಖ್ಯೆ: 9663211553, ಮಂಗಳೂರು ಬಸ್ ನಿಲ್ದಾಣ, ದೂರವಾಣಿ ಸಂಖ್ಯೆ: 7760990720 ಸಂಪರ್ಕಿಸುವಂತೆ ಕೆಎಸ್‍ಆರ್​ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad
Ad
Nk Channel Final 21 09 2023