Bengaluru 22°C
Ad

7,637 ಪ್ರಯಾಣಿಕರನ್ನು ನಿರ್ವಹಿಸಿ ಹೊಸ ದಾಖಲೆ ನಿರ್ಮಿಸಿದ ಮಂಗಳೂರು ವಿಮಾನ ನಿಲ್ದಾಣ

ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿ. (ಎಎಎಚ್‌ಎಲ್) ನಿರ್ವಹಿಸುವ ಮಂಗಳೂರು ವಿಮಾನ ನಿಲ್ದಾಣವು ನ. 9ರಂದು ಅತೀ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

ಮಂಗಳೂರು: ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿ. (ಎಎಎಚ್‌ಎಲ್) ನಿರ್ವಹಿಸುವ ಮಂಗಳೂರು ವಿಮಾನ ನಿಲ್ದಾಣವು ನ. 9ರಂದು ಅತೀ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

Ad

ವಿಮಾನ ನಿಲ್ದಾಣವು 7,637 ಪ್ರಯಾಣಿಕರನ್ನು ನಿರ್ವಹಿಸಿರುವುದು ೨೦೨೦ರ ಅ. ೩೧ರ ಎಎಎಚ್‌ಎಲ್‌ನ ವಾಣಿಜ್ಯ ಕಾರ್ಯಾಚರಣೆ (ಸಿಒಡಿ) ಅನಂತರದ ಗರಿಷ್ಠ ಪ್ರಮಾಣವಾಗಿದೆ.ಪ್ರಯಾಣಿಕರಲ್ಲಿ 7,498 ವಯಸ್ಕರು ಮತ್ತು 139 ಶಿಶುಗಳು ಸೇರಿದ್ದಾರೆ.

Ad

ಈ ಹಿಂದೆ 2023ರ ಡಿ. 31ರಂದು 51 ಏರ್ ಟ್ರಾಫಿಕ್ ಮೂವ್‌ಮೆಂಟ್‌ನೊಂದಿಗೆ 7,548 ಪ್ರಯಾಣಿಕರು ಪ್ರಯಾಣಿಸಿದ್ದರು. 2023ರ ನ. 25ರಂದು 7,452 ಪ್ರಯಾಣಿಕರು, 2024 ಆ.15ರಂದು 7,406 ಪ್ರಯಾಣಿಕರು, 2023ರ ನ. 19ಂದು 7,399 ಪ್ರಯಾಣಿಕರು ಮತ್ತು ಡಿ. 10ರಂದು 7,350 ಪ್ರಯಾಣಿಕರನ್ನು ಒಂದೇ ದಿನ ನಿರ್ವಹಿಸಲಾಗಿತ್ತು. ನಿಲ್ದಾಣದಲ್ಲಿ ಒಂದೇ ದಿನದಲ್ಲಿ 7,000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸುವುದು ವಿಶೇಷ ಸಾಧನೆಯಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.

Ad
Ad
Ad
Nk Channel Final 21 09 2023