Bengaluru 25°C

ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು

ಮಕರ ಸಂಕ್ರಮಣ ಹಾಗೂ ವಾರಾಂತ್ಯದ ಸರಣಿ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ/ ಕಾರವಾರಕ್ಕೆ 25.100 ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ರೈಲು ಸಂಚರಿಸಲಿದೆ.

ದಕ್ಷಿಣ ಕನ್ನಡ : ಮಕರ ಸಂಕ್ರಮಣ ಹಾಗೂ ವಾರಾಂತ್ಯದ ಸರಣಿ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಉಡುಪಿ-ಕುಂದಾಪುರ/ ಕಾರವಾರಕ್ಕೆ 25.100 ಮಧ್ಯಾಹ್ನ ಬೆಂಗಳೂರಿನಿಂದ ವಿಶೇಷ ರೈಲು ಸಂಚರಿಸಲಿದೆ.


ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಮನವಿಯಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದಾರೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿಯ ವಿಶ್ವೇರಯ್ಯ ಟರ್ಮಿನಲ್‌ನಿಂದ ಜ.10ರ ಮಧ್ಯಾಹ್ನ 1ಕ್ಕೆ ಹೊರಡಲಿದ್ದು,


ಪಡೀಲ್ ಬೈಪಾಸ್ ಮೂಲಕ ರಾತ್ರಿ 12ಕ್ಕೆ ಉಡುಪಿ, 1 ಗಂಟೆಗೆ ಕುಂದಾಪುರಕ್ಕೆ ಬಂದು, ಬಳಿಕ ಕಾರವಾರ ಕಡೆಗೆ ಸಂಚರಿಸಲಿದೆ. ಈ ರೈಲು ಜ. 11ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರದಿಂದ ಬೆಂಗಳೂರಿಗೆ ಸಂಚರಿಸಲಿದೆ.


Nk Channel Final 21 09 2023