Bengaluru 22°C
Ad

ಮಹಾಕಾಳಿಪಡ್ಡು ಕೆಳಸೇತುವೆ ಜನವರಿಯಲ್ಲಿ ಪೂರ್ಣ: ಸಂಸದರ ಅಧ್ಯಕ್ಷತೆಯಲ್ಲಿ ಸಭೆ

ಜಪ್ಪಿನಮೊಗರು ಕ್ರಾಸ್ (ರಾ.ಹೆ.66) ಸಮೀಪ ಮಹಾಕಾಳಿ ಪಡ್ಡುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಳ ಸೇತುವೆಗಳ (ಆರ್‌ಯುಬಿ) ಕಾಮಗಾರಿ 2025ಜನವರಿಯಲ್ಲಿ ಪೂರ್ಣಗೊಳ್ಳಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಜರಗಿದ ರೈಲ್ವೆ ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ದಕ್ಷಿಣ ರೈಲ್ವೆ ಅಧಿ ಕಾರಿಗಳು ಈ ಕುರಿತು ಮಾಹಿತಿ ನೀಡಿದರು.

ಮಂಗಳೂರು : ಜಪ್ಪಿನಮೊಗರು ಕ್ರಾಸ್ (ರಾ.ಹೆ.66) ಸಮೀಪ ಮಹಾಕಾಳಿ ಪಡ್ಡುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಳ ಸೇತುವೆಗಳ (ಆರ್‌ಯುಬಿ) ಕಾಮಗಾರಿ 2025ಜನವರಿಯಲ್ಲಿ ಪೂರ್ಣಗೊಳ್ಳಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಜರಗಿದ ರೈಲ್ವೆ ಅಭಿವೃದ್ಧಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ದಕ್ಷಿಣ ರೈಲ್ವೆ ಅಧಿ ಕಾರಿಗಳು ಈ ಕುರಿತು ಮಾಹಿತಿ ನೀಡಿದರು.

Ad

ನಿರಂತರ ಸುರಿಯುತ್ತಿದ್ದ ಮಳೆ ಯಿಂದ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕೆಳಸೇತುವೆಯ ಕೊನೆಯ ನಾಲ್ಕು ಬಾಕ್ಸ್ಗಳ ಕಾಮಗಾರಿ ಆರಂಭಿಸಲಾಗಿದೆ ಎಂದು ರೈಲ್ವೇ ಪಾಲಕ್ಕಾಡ್ ವಿಭಾಗದ ವಿಭಾಗೀಯ ಸಹಾಯಕ ರೈಲ್ವೇ ಪ್ರಬಂಧಕ ಅನಿಲ್ ಕುಮಾರ್ ಹೇಳಿದರು.

Ad

ಅವಳಿ ಕೆಳ ಸೇತುವೆಗಳ ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಮಂಗಳೂರು ಸ್ಮಾರ್ಟ್ ಸಿಟಿ ಜತೆ ಸೇರಿ ಸಂಪರ್ಕ ರಸ್ತೆಗಳ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಸದ ಕ್ಯಾ | ಚೌಟ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್.ಆನಂದ್ ಅವರಿಗೆ ಸೂಚಿಸಿದರು.

Ad

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಪುನರಭಿವೃದ್ಧಿ ಕಾಮಗಾರಿಗೆ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಕೇಂದ್ರ ಕಚೇರಿ ಮೂಲಕ ರೈಲ್ವೆ ಇಲಾಖೆಗೆ ಸಲ್ಲಿಸಲಾಗುವುದು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ಸ್ಟೇಬ್ಲಿಂಗ್ ಲೈನ್ ಒದಗಿಸಲಾಗುವುದು ಮತ್ತು ವರ್ಷ ದೊಳಗೆ ಕಾಮಗಾರಿಯನ್ನು ಪೂರ್ತಿ ಮಾಡಲಾಗುವುದು ಎಂದರು.

Ad
Ad
Ad
Nk Channel Final 21 09 2023