ಮಂಗಳೂರು: ಲೋಕಯುಕ್ತ ನೋಟಿಸ್ ವಿಚಾರವಾಗಿ ಸಚಿವ ಜಮೀರ್ ಹೇಳಿಕೆ ನೀಡಿದ್ದು, ನೋಟಿಸ್ ಬಂದದ್ದು ನನಗೆ ಗೊತ್ತಿಲ್ಲ. ನೋಟಿಸ್ ಕೊಡೋದು ರೂಟೀನ್. ಇಡಿಯವರು ಎಸಿಬಿಗೆ ಪಾವರ್ಡ್ ಮಾಡಿದ್ದಾರೆ ಕೇಸ್ ಅಲ್ಲಿಂದ ಲೋಕಯುಕ್ತಗೆ ಕೇಸ್ ಬಂದಿದೆ. ನೋಟಿಸ್ ಬಂದ ಮೇಲೆ ಹೋಗಲೇ ಬೇಕು ಎಂದರು.
ನಾನು ದೇವೇಗೌಡ ಕುಟುಂಬ ಖರೀದಿ ಮಾಡುತ್ತೇನೆ ಅಂತ ಹೇಳಿಲ್ಲ. ಕುಮಾರಸ್ವಾಮಿ ಮುಸ್ಲಿಂ ನನಗೆ ಬೇಕಾಗಿಲ್ಲ ಅಂತ ಹೇಳಿದ್ರು, ಈ ಹಿನ್ನೆಲೆಯಲ್ಲಿ ನಾನು ಹೇಳಿಕೆ ನೀಡಿದ್ದು. ಮುಸ್ಲಿಂ ಓಟ್ ಬೇಡ ಅಂತ ದುಡ್ಡು ಕೊಟ್ಟು ಖರೀದಿ ಮಾಡುತ್ತಿದ್ದೀರಿ ಅಲ್ವಾ ಎಷ್ಟು ಸರಿ. ಮುಸ್ಲಿಂ ಪಂಚರ್ ಹಾಕುವವರು, ವೆಲ್ಡಿಂಗ್ ಮಾಡುವರು ಅಂತ ಲಘುವಾಗಿ ಮಾತಾಡಿದ್ದಾರೆ.
ಸ್ವಾಮಿ ನಾನು ಬಡವರು ಅವರ ಬಳಿ ಯಾಕೆ ಓಟ್ ಕೇಳುತ್ತೀರಿ. ಕುಮಾರಸ್ವಾಮಿಗೆ ಅದೇ ಪ್ರಶ್ನೆ ನಂದು. ಕುಮಾರಸ್ವಾಮಿ ಯಾವಾಗ ಸತ್ಯ ಹೇಳಿದ್ದಾರೆ. ಯೂ ಟರ್ನ್ ಕುಮಾರಸ್ವಾಮಿ ಅಂತ ಅವರ ಹೆಸರಿದೆ. ಯಾವಾಗ ಬೇಕಾದರೂ ಹೇಗೆ ಬೇಕಾದರೂ ಅವರು ಟರ್ನ್ ಮಾಡುತ್ತಾರೆ. ವೈಯಕ್ತಿಕವಾಗಿ ಕುಮಾರಸ್ವಾಮಿಗೆ ಹೇಳಿರುವುದು.
ಒಕ್ಕಲಿಗರ ಬಗ್ಗೆ ನನಗೆ ಗೌರವ ಇದೆ. ಒಕ್ಕಲಿಗರಿಗೆ ಯಾವ ಹೇಳಿಕೆ ನೀಡಿಲ್ಲ. ಜನತಾದಳಕ್ಕೆ ಬರಲು ಕಾರಣ ಆದಿ ಚುಂಚನಗಿರಿ ಸ್ವಾಮೀಜಿ. ನಾನು ಮಠದ ಹುಡುಗ, ಆದಿ ಚುಂಚನಗಿರಿ ಮಠದಲ್ಲಿ ಬೆಳೆದಿದ್ದು ನಾನು. ಸ್ಚಾಮೀಜಿ ಬಳಿ ಕೇಳಲು ಹೇಳಿ. ಪ್ರತಿ ಶನಿವಾರ ನಾನು ಬೆಳಗ್ಗಿನಿಂದ ಸಂಜೆವರೆಗೂ ಮಠದಲ್ಲಿ ಇರುತ್ತೇನೆ. ನಾನು ಸ್ವಾಮೀಜಿ ಮಡಿಲಲ್ಲಿ ಬೆಳೆದವ ಎಂದರು.
ಜಮೀರ್ ಬಂದಿದ್ದು ಪ್ಲಸ್ ಆಗಿದೆ ಸ್ವಲ್ಪ ಹೇಳಿಕೆಯಿಂದ ಅನಾನುಕೂಲ ಅಗಿದೆ ಅಂತ ಯೋಗಿಶ್ವರ್ ಹೇಳಿದ್ದಾರೆ. ಬರೆದಿಟ್ಟುಕೊಳ್ಳಿ, ಚೆನ್ನಪಟ್ಟಣದಲ್ಲಿ ಏನೇನು ಆಗುದಿಲ್ಲ, ಚೆನ್ನಪಟ್ಟಣದಲ್ಲಿ ಮೂರು ದಿನ ಪ್ರಚಾರ ಮಾಡಿದ್ದೇನೆ. ಯೋಗಿಶ್ವರ್ 18 ರಿಂ20 ಸಾವುರ ಮತದಿಂದ ಗೆಲ್ಲುತ್ತಾರೆ ಬರೆದಿಟ್ಟುಕೊಳ್ಳಿ ಎಂದು ಮಂಗಳೂರಿನಲ್ಲಿ ಸಚಿವ ಜಮೀರ್ ಹೇಳಿಕೆ ನೀಡಿದ್ದಾರೆ.