ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಇದರ ವತಿಯಿಂದ ಲಯನ್ಸ್ ಸೇವಾ ಮಂದಿರದಲ್ಲಿ ಕ್ರಿಸ್ಮಸ್ ಆಚರಣೆ ನಡೆಯಿತು. ಶ್ರೀ ಜಯರಾಜ್ ಪ್ರಕಾಶ್ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದ್ದರು.
ಮುಖ್ಯ ಅತಿಥಿಯಾಗಿ ಕ್ರೆಡೈ ಮಂಗಳೂರು ಇದರ ಅಧ್ಯಕ್ಷ ವಿನೋದ್ ಎ.ಆರ್. ಪಿಂಟೋ ಆಗಮಿಸಿದ್ದರು. ಭಾರತಿ ಪುಷ್ಪರಾಜನ್ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದ್ದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗೆ ದಾನಿಗಳಿಂದ ಸಹಾಯಧನದ ಚೆಕ್ ವಿತರಿಸಲಾಯಿತು.
ಮುಖ್ಯ ಅತಿಥಿಗಳು ಕ್ರಿಸ್ಮಸ್‌ನ ವಿಶೇಷತೆಯ ಬಗ್ಗೆ ವಿವರಿಸಿದರು. ಲಯನ್ಸ್ ಜಿಲ್ಲಾ ಕ್ರಿಸ್ಮಸ್ ಆಚರಣೆಯ ಸಂಯೋಜಕರಾದ ಅರುಣ್ ಪೀಟರ್ ಪಿಂಟೋರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸದಸ್ಯರಿಂದ ಕ್ರಿಸ್ಮಸ್ ಗೀತೆಗಳನ್ನು ಹಾಡಲಾಯಿತು.
ಅನುಶ್ ಡೇವಿಸ್ ಅವರು ಸಾಂತಾಕ್ಲಾಸ್ ಆಗಿ ರಂಜಿಸಿದರು. ವೇದಿಕೆಯಲ್ಲಿ ಮಾಜಿ ಅಧ್ಯಕ್ಷರಾದ ಎಸ್ ಎಸ್ ಪೂಜಾರಿ, ಪ್ರಾಂತೀಯ ಅಧ್ಯಕ್ಷರಾದ ಗುರುಪ್ರೀತ್ ಆಳ್ವ, ಖಚಾಂಜಿ, ನಾರಾಯಣ ಕೋಟ್ಯಾನ್, ಲಿಯೋ ಅಧ್ಯಕ್ಷರಾದ ಅಲಿಸಾ ಸಿಕ್ವೇರಾ, ಬೆಂಜಮೀನ್ ಅಂಕಿತ್ ಉಪಸ್ಥಿತರಿದ್ದರು.
ಲಯನ್ಸ್ ಮಾಜಿ ರಾಜ್ಯಪಾಲರಾದ ಅರುಣ್ ಎಂ. ಶೆಟ್ಟಿ ಮತ್ತು ಉಪರಾಜ್ಯಪಾಲ ಅರವಿಂದ್ ಶೆಣೈ ಹಾಜರಿದ್ದರು. ವಿಲ್ಸನ್ ಈ ಕಾರ್ಯಕ್ರಮದ ಸಂಯೋಜಕರಾಗಿದ್ದರು. ಕಾರ್ಯದರ್ಶಿ ರವಿಶಂಕರ್ ರೈ ವಂದಾನಾರ್ಪಣೆಗೈದರು.