Bengaluru 28°C
Ad

ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಯುವ ಮನಸ್ಸುಗಳು ಒಂದಾಗಲಿ: ಕಿಶೋರ್ ಕುಮಾರ್ 

 ನನ್ನ ಇಂದಿನ ಬೆಳವಣಿಗೆಯ ಬಹುಪಾಲು ಯಶಸ್ಸು ಪುತ್ತೂರು ವಿವೇಕಾನಂದ ಕಾಲೇಜಿಗೆ ಸಲ್ಲಬೇಕು. ವ್ಯಕ್ತಿತ್ವ‌ ವಿಕಸನದ ಮೂಲಕ ಕಾಲೇಜು ಉತ್ತಮ ನಾಗರಿಕರನ್ನು ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

ಪುತ್ತೂರು: ನನ್ನ ಇಂದಿನ ಬೆಳವಣಿಗೆಯ ಬಹುಪಾಲು ಯಶಸ್ಸು ಪುತ್ತೂರು ವಿವೇಕಾನಂದ ಕಾಲೇಜಿಗೆ ಸಲ್ಲಬೇಕು. ವ್ಯಕ್ತಿತ್ವ‌ ವಿಕಸನದ ಮೂಲಕ ಕಾಲೇಜು ಉತ್ತಮ ನಾಗರಿಕರನ್ನು ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಹೇಳಿದರು.

Ad

ಪುತ್ತೂರು ವಿವೇಕಾನಂದ ಕಾಲೇಜಿನ ನವಯುಗ 2024 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ವಿಧ್ಯಾಭ್ಯಾಸದ‌ ಜೊತೆ ಜೀವನದ ಗುರಿಯನ್ನು ಸಾಧಿಸಲು ಬೇಕಾದ ಮಾನಸಿಕ ದೃಢತೆಯನ್ನು ಬೆಳೆಸಿಕೊಳ್ಳಿ. ದೇಶದ ಭವಿಷ್ಯದ ಶಕ್ತಿ ನೀವು. ಹೊಸತನದ ಚಿಂತನೆಗಳು ನಿಮ್ಮ ಮೂಲಕ ದೇಶಕ್ಕೆ ದೊರೆಯುವಂತಾಗಲಿ ಎಂದು ಹೇಳಿದರು.

Ad

ಪಂಚಭೂತಗಳಂತೆ ಸನ್ನಡತೆ, ಸದೃಢತೆ, ಸತ್ ಚಿಂತನೆ, ಸ್ವಾಭಿಮಾನ ಮತ್ತು ರಾಷ್ಟ್ರಪ್ರೇಮ ಎಂಬ ಪಂಚ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಕಾರ್ಯ ಮಾಡಬೇಕು. ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಯುವ‌ ಮನಸ್ಸುಗಳು ಒಂದಾಗಿ ದೇಶದ ಸಂರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಕಿಶೋರ್ ಕುಮಾರ್ ಅವರು ಹೇಳಿದರು.

Ad

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡ‌ಳಿತ ಮಂಡಳಿಯ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ವಹಿಸಿಕೊಂಡರು. ಆಡಳಿತ ಮಂಡಳಿಯ ಪ್ರಮುಖರು, ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Ad
Ad
Ad
Nk Channel Final 21 09 2023