ಮಂಗಳೂರು: ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ವಿಧಾನ ಪರಿಷತ್ ಶಾಸಕ ಬಿ.ಕೆ. ಹರಿಪ್ರಸಾದ್ ರವಿವಾರ ನಗರದ ಕೊಟ್ಟಾರ ಚೌಕಿಯಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಂಗಳೂರು ಗುರುದ್ವಾರ ಗುರುಸಿಂಗ್ ಸಭಾ ಸೊಸೈಟಿಯ ಅಧ್ಯಕ್ಷ ಜೀತೇಂದ್ರ ಸಿಂಗ್, ಕಾರ್ಯದರ್ಶಿ ಸುರ್ವೀರ್ ಸಿಂಗ್, ಹರ್ವಂದರ್ ಸಿಂಗ್, ಅಮರ್ಜೀತ್ ಸಿಂಗ್, ಗುರುನಾಮ್ ವಿಕ್ಕಿ ಸಿಂಗ್ ಬಿ.ಕೆ. ಹರಿಪ್ರಸಾದ್ ಅವರನ್ನು ಸ್ವಾಗತಿಸಿದರು. ಈ ಸಂಧರ್ಭ ಚಿತ್ತರಂಜನ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಸಮರ್ಥ ಭಟ್, ನೀತ್ ಶರನ್, ರಾಜೇಶ್ ದೇವಾಡಿಗ, ನವಾಜ್ ಉಪಸ್ತಿತರಿದ್ದರು.