Bengaluru 23°C
Ad

ಕೂಳೂರು ಸೇತುವೆ ಬಳಿ ಸ್ಕೂಟರ್-ಲಾರಿ ಡಿಕ್ಕಿ; ಸಹ ಸವಾರೆ ಸಾವು

Koolur

ಮಂಗಳೂರು: ಕಂಟೈನರ್ ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಸಹಸವಾರೆ ಸ್ಥಳದಲ್ಲೇ ಸಾವನಪ್ಪಿದ ಘಟನೆ ಕೂಳೂರು ಸೇತುವೆ ಬಳಿ ನಡೆದಿದೆ.

ಮೃತರನ್ನು ಲಾವಣ್ಯ (27) ಎಂದು ಗುರುತಿಸಲಾಗಿದೆ. ಲಾವಣ್ಯ ಅವರು ತಮ್ಮ ಪತಿ ಜೊತೆ ಸ್ಕೂಟರ್ ನಲ್ಲಿ ಪಣಂಬೂರಿನಿಂದ ಕಾವೂರು ಕಡೆಗೆ ತೆರಳುತ್ತಿದ್ದ ವೇಳೆ ಕೂಳೂರು ಸೇತವೆ ಬಳಿ ಕಂಟೇನರ್ ಲಾರಿ ಚಾಲಕ ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ.

ಈ ವೇಳೆ ಇಬ್ಬರೂ ಸ್ಕೂಟರ್ ನಿಂದ ರಸ್ತೆಗೆ ಬಿದ್ದಿದ್ದು, ಲಾವಣ್ಯ ಅವರ ತಲೆ ಮೇಲೆ ಲಾರಿಯ ಹಿಂಭಾಗದ ಚಕ್ರ ಹರಿದಿದ್ದು, ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಶಕೀಲ್ ಸುವರ್ಣ ಇವರಿಗೆ ಸಣ್ಣ ಗಾಯವಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Ad
Ad
Nk Channel Final 21 09 2023