ಮಂಗಳೂರು: ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯು ಮಾರಣಾಂತಿಕವಾಗಿದ್ದ ʻಬಡ್-ಚಿಯಾರಿ ಸಿಂಡ್ರೋಮ್ʼ ಮತ್ತು ʻಮಯೋಕ್ಲೋನಿಕ್ ಮೂರ್ಛೆʼರೋಗದಿಂದ ಬಳಲುತ್ತಿದ್ದ ಮೂರು ವರ್ಷದ ಬಾಲಕನಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡುವ ಮೂಲಕ ಮಹತ್ವದ ವೈದ್ಯಕೀಯ ಸಾಧನೆ ಮಾಡಿದೆ.
ಬಹು ವಿಭಾಗದ ತಜ್ಞರ ತಂಡದ ಪರಿಣತಿ ಮತ್ತು ಸಹಯೋಗದ ಪ್ರಯತ್ನಗಳ ಮೂಲಕ, ಮಗು ಸಂಪೂರ್ಣ ಚೇತರಿಸಿಕೊಂಡಿದ್ದು, ಸಂಕೀರ್ಣ ಪ್ರಕರಣಗಳಲ್ಲಿ ಅತ್ಯಾಧುನಿಕ ಆರೈಕೆಯನ್ನು ಒದಗಿಸುವ ಆಸ್ಪತ್ರೆಯ ಬದ್ಧತೆಯನ್ನು ಈ ಪ್ರಕರಣವು ಪ್ರದರ್ಶಿಸುತ್ತದೆ.
ಸೆಪ್ಟೆಂಬರ್ 2024ರಲ್ಲಿ, 12 ಕೆಜಿ ತೂಕದ ಮಾಸ್ಟರ್ ಕ್ರಿಶ್ (ಹೆಸರು ಬದಲಾಯಿಸಲಾಗಿದೆ) ತೀವ್ರ ಹೊಟ್ಟೆ ಉಬ್ಬರ, ಉಸಿರಾಟದ ತೊಂದರೆಯೊಂದಿಗೆ ಮಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಹಿಂದೆ ಆತನು ಮೂರ್ಛೆ ರೋಗಕ್ಕೆ ಮೌಖಿಕವಾಗಿ ಮೂರ್ಛೇರೋಗ ತಡೆ (ಆಂಟಿಕಾನ್ವಲ್ಸೆಂಟ್) ಚಿಕಿತ್ಸೆ ಪಡೆದಿದ್ದ. ಪರೀಕ್ಷಿಸಿದಾಗ, ಆತನ ಹೊಟ್ಟೆಯು 63 ಸೆಂ.ಮೀ ಯಷ್ಟು ಭಾರಿ ಊದಿಕೊಂಡಿರುವುದನ್ನು ವೈದ್ಯರು ಗುರುತಿಸಿದರು. ಹೆಚ್ಚಿನ ಮೌಲ್ಯಮಾಪನದಿಂದ ಮಾಸ್ಟರ್ ಕ್ರಿಶ್ ʻಬುಡ್-ಚಿಯಾರಿ ಸಿಂಡ್ರೋಮ್ʼ ಅನ್ನು ಹೊಂದಿರುವುದು ದೃಢಪಟ್ಟಿತು.
ಇದು ಅಪರೂಪದ ಸ್ಥಿತಿಯಾಗಿದ್ದು, ಇದರಲ್ಲಿ ಎಲ್ಲಾ ಮೂರು ಪ್ರಮುಖ ಯಕೃತ್ತಿನ ರಕ್ತನಾಳಗಳು ಮುಚ್ಚಲ್ಪಡುತ್ತವೆ. ಇದು ಹೊಟ್ಟೆಯಲ್ಲಿ ದ್ರವ ಶೇಖರಣೆಗೆ ಕಾರಣವಾಗುತ್ತದೆ. ಪಿತ್ತಜನಕಾಂಗದ ಅಪಸಾಮಾನ್ಯ ಕ್ರಿಯೆ ಮತ್ತು ಹೆಪ್ಪುಗಟ್ಟುವಿಕೆಯ ಅಸಹಜತೆಗಳಿಂದ ಬಾಲಕನ ಸ್ಥಿತಿಯು ಜಟಿಲವಾಗಿತ್ತು.
ವ್ಯಾಪಕ ಪರೀಕ್ಷೆಗಳ ನಂತರ, ಈ ಮಗುವಿನ ರಕ್ತನಾಳಗಳು ಅಗತ್ಯವಾದ ಸಾಮರ್ಥ್ಯವನ್ನು ಹೊಂದಿಲ್ಲದ ಕಾರಣ ಅಥವಾ ಅವನ ವೈದ್ಯಕೀಯ ಸ್ಥಿತಿ ಸ್ಥಿರವಾಗಿಲ್ಲದ ಕಾರಣ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಯಿತು. ಆದರೆ, ಈ ರಕ್ತನಿರ್ಬಂಧತೆಯನ್ನು ನಿವಾರಿಸುವುದು ಹೇಗೆ ಮತ್ತು ಯಕೃತ್ತಿನ ಕಾರ್ಯವನ್ನು ಪುನಃಸ್ಥಾಪಿಸುವುದು ಹೇಗೆ ಎಂಬ ದೊಡ್ಡ ಸವಾಲು ಸಹ ಎದುರಾಯಿತು.
ಡಾ. ಸೌಂದರ್ಯ (ಮಕ್ಕಳ ತಜ್ಞರು), ಡಾ.ಕೀರ್ತಿರಾಜ್ (ಇಂಟರ್ವೆನ್ಷನಲ್ ನ್ಯೂರೋ-ರೇಡಿಯಾಲಜಿಸ್ಟ್), ಡಾ.ವಿಜಯ್ ಕುಮಾರ್ (ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್), ಡಾ. ಮಾಚಯ್ಯ (ರೇಡಿಯಾಲಜಿಸ್ಟ್) ಮತ್ತು ಡಾ. ಸುನಿಲ್ (ಅರಿವಳಿಕೆ ತಜ್ಞರು) ನೇತೃತ್ವದ ಬಹು-ವಿಭಾಗದ ತಜ್ಞರ ತಂಡವು ಈ ಪ್ರಕರಣದ ಸಂಕೀರ್ಣ ಮತ್ತು ಅಪಾಯಕಾರಿ ಸ್ವರೂಪವನ್ನು ಪರಿಹರಿಸಲು ತ್ವರಿತವಾಗಿ ಚಿಕಿತ್ಸಾ ಯೋಜನೆಯನ್ನು ರೂಪಿಸಿತು. ತಜ್ಞ ವೈದ್ಯರ ತಂಡವು ಸ್ಟೆಂಟ್ ಅನ್ನು ಇರಿಸಲು ಮತ್ತು ಯಕೃತ್ತಿಗೆ ರಕ್ತದ ಹರಿವನ್ನು ಪುನಃಸ್ಥಾಪಿಸಲು ಮಧ್ಯಸ್ಥಿಕೆ ಕಾರ್ಯವಿಧಾನವನ್ನು ನಡೆಸಿತು.
ಮಕ್ಕಳ ತಜ್ಞರಾದ ಡಾ.ಸೌಂದರ್ಯ ಅವರು ಈ ಬಗ್ಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ: “ಮಾಸ್ಟರ್ ಕ್ರಿಶ್ ಪ್ರಕರಣವು ಸಂಕೀರ್ಣವಾಗಿತ್ತು, ನರವೈಜ್ಞಾನಿಕ ಮತ್ತು ಯಕೃತ್ತಿನ ಸವಾಲುಗಳನ್ನು ಒಳಗೊಂಡಿತ್ತು. ಸಮಗ್ರ ಚಿಕಿತ್ಸಾ ಯೋಜನೆಯನ್ನು ಖಚಿತಪಡಿಸಿಕೊಳ್ಳಲು ಬಾಲಕನ ಮೂರ್ಛೆರೋಗ ಮತ್ತು ಪಿತ್ತಜನಕಾಂಗದ ಸ್ಥಿತಿ ಎರಡನ್ನೂ ಏಕಕಾಲದಲ್ಲಿ ಪರಿಹರಿಸುವುದು ಅತ್ಯಗತ್ಯವಾಗಿತ್ತು. ಬಾಲಕ ಇಷ್ಟು ಚೆನ್ನಾಗಿ ಚೇತರಿಸಿಕೊಳ್ಳುತ್ತಿರುವುದನ್ನು ನೋಡುವುದು ನಿಜಕ್ಕೂ ಅತ್ಯಂತ ನಂಬಲಾಗದ ಮತ್ತು ಸಂತೋಷದ ವಿಷಯವಾಗಿದೆ.ʼʼ
ಚಿಕಿತ್ಸೆಯ ನಂತರ, ಮಗುವಿನ ಹಿಂದಿನ ಯಕೃತ್ತಿನ ಅಪಸಾಮಾನ್ಯ ಕ್ರಿಯೆಯ ದೃಷ್ಟಿಯಿಂದ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಈ ತೊಡಕುಗಳ ಹೊರತಾಗಿಯೂ, ಮಕ್ಕಳ ಐಸಿಯುನಲ್ಲಿನ ವೈದ್ಯರು ಮತ್ತು ನರ್ಸಿಂಗ್ ತಂಡವು ವ್ಯಾಪಕ ಆರೈಕೆಯನ್ನು ಒದಗಿಸಲು ಶ್ರಮಿಸಿತು, ಮತ್ತು ಕೆಲವೇ ದಿನಗಳಲ್ಲಿ, ಕ್ರಿಶ್ ಆರೋಗ್ಯದಲ್ಲಿ ಸುಧಾರಣೆ ಪ್ರಾರಂಭವಾಯಿತು. ಆತನ ಯಕೃತ್ತಿಗೆ ಪುನಃಸ್ಥಾಪಿಸಲಾದ ರಕ್ತದ ಹರಿವು ಆತನ ಯಕೃತ್ತಿನ ಕಾರ್ಯವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡಿತು, ಮತ್ತು ಈಗ ಒಂದು ತಿಂಗಳ ನಂತರ, ಮಗುವು ಆರೋಗ್ಯವಾಗಿದೆ ಮತ್ತು ರೋಗಲಕ್ಷಣಗಳಿಂದ ಮುಕ್ತವಾಗಿದೆ.
ಇಂಟರ್ವೆನ್ಶನಲ್ ನ್ಯೂರೋ-ರೇಡಿಯಾಲಜಿಸ್ಟ್ ಡಾ. ಕೀರ್ತಿರಾಜ್ ಅವರು ಮಾತನಾಡಿ, “ಕ್ರಿಶ್ ಚೇತರಿಕೆಯು ʻಡಿಐಪಿಎಸ್ʼ ಎಂದು ಕರೆಯಲ್ಪಡುವ ನಿಖರವಾದ ಮಧ್ಯಸ್ಥಿಕೆ ಕಾರ್ಯವಿಧಾನದಿಂದ ಸಾಧ್ಯವಾಯಿತು. ಬಾಲಕನ ಯಕೃತ್ತಿಗೆ ರಕ್ತದ ಹರಿವನ್ನು ಪುನಃಸ್ಥಾಪಿಸಲು ನಾವು ಇದನ್ನು ನಡೆಸಿದ್ದೇವೆ. ʻಡೈರೆಕ್ಟ್ ಇಂಟ್ರಾಹೆಪಾಟಿಕ್ ಪೋರ್ಟೊಸಿಸ್ಟಮಿಕ್ ಶಂಟ್ʼ (ಡಿಐಪಿಎಸ್) ಎಂಬುದು ಕೆಳಮಟ್ಟದ ವೆನಾ ಕಾವಾ (ಐವಿಸಿ) ಮೂಲಕ ಪೋರ್ಟಲ್ ರಕ್ತನಾಳದಲ್ಲಿ ಸ್ಟೆಂಟ್ ಅನ್ನು ಇರಿಸುವ ಮೂಲಕ ಪೋರ್ಟಲ್ನ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ ಒಂದು ಕಾರ್ಯವಿಧಾನವಾಗಿದೆ.
ಇದೊಂದು ನಿರ್ಣಾಯಕ ಕಾರ್ಯವಿಧಾನವಾಗಿತ್ತು, ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನೋಡಿ ನಮಗೆ ಸಂತೋಷವಾಗಿದೆ. ಈ ಚಿಕಿತ್ಸೆಯ ಯಶಸ್ಸಿನಲ್ಲಿ ಬಹು-ವಿಭಾಗದ ತಂಡದ ಕೆಲಸವು ಪ್ರಮುಖ ಪಾತ್ರ ವಹಿಸಿದೆ.ʼʼ
ಮಾಸ್ಟರ್ ಕ್ರಿಶ್ ಚೇತರಿಕೆಯು ಅಪರೂಪದ ಮತ್ತು ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವಲ್ಲಿ ಆರೋಗ್ಯ ವೃತ್ತಿಪರರ ನಡುವಿನ ಸಹಯೋಗದ ಮಹತ್ವವನ್ನು ಎತ್ತಿ ತೋರುತ್ತದೆ. ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿ ಉಳಿದ ಅವರ ಕುಟುಂಬವು, ತಮ್ಮ ಮಗುವಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆಯನ್ನು ಒದಗಿಸುವ ಬದ್ಧತೆಗಾಗಿ ವೈದ್ಯಕೀಯ ತಂಡಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿತು.
ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು “ಈ ಪ್ರಕರಣವು ಆರೋಗ್ಯ ರಕ್ಷಣೆಯಲ್ಲಿ ತಂಡದ ಕೆಲಸದ ಶಕ್ತಿಗೆ ನೈಜ ಉದಾಹರಣೆಯಾಗಿದೆ. ನಮ್ಮ ತಜ್ಞರು ಒಟ್ಟಾಗಿ ಕೆಲಸ ಮಾಡಿದರು, ಮಾಸ್ಟರ್ ಕ್ರಿಶ್ಗೆ ಸಾಧ್ಯವಾದಷ್ಟು ಉತ್ತಮ ಫಲವನ್ನು ಸಾಧಿಸಲು ತಮ್ಮ ಪರಿಣತಿಯನ್ನು ಒಟ್ಟಿಗೆ ಸೇರಿಸಿದರು. ನಮ್ಮ ತಂಡದ ಪ್ರಯತ್ನಗಳು ಮತ್ತು ನಮ್ಮ ರೋಗಿಗಳಿಗೆ ನಾವು ಒದಗಿಸುವ ಆರೈಕೆಯ ಬಗ್ಗೆ ನಮಗೆ ಹೆಮ್ಮೆ ಇದೆ.
ಪೂರ್ಣ ಸಮಯದ ಮಕ್ಕಳ ತಜ್ಞರು ಮತ್ತು ಸೂಪರ್ ಸ್ಪೆಷಲಿಸ್ಟ್ಗಳ ಉಪಸ್ಥಿತಿಯೊಂದಿಗೆ ಆಸ್ಪತ್ರೆಯು ಮಕ್ಕಳಿಗೆ ಸಂಬಂಧಿಸಿದ ವೈದ್ಯಕೀಯ ತುರ್ತುಸ್ಥಿತಿಗಳು ಮತ್ತು ನಿರ್ಣಾಯಕ ಆರೈಕೆಗೆ ಅಸಾಧಾರಣ ಸೇವೆಗಳನ್ನು ಒದಗಿಸುತ್ತದೆ. ʻಮಕ್ಕಳ ಅಲರ್ಜಿʼ, ʻಮಕ್ಕಳ ಹೆಮಾಟೊ-ಆಂಕೊಲಜಿʼ, ʻಮಕ್ಕಳ ಎಂಡೋಕ್ರೈನಾಲಜಿʼ, ʻಮಕ್ಕಳ ಮೂತ್ರಪಿಂಡಶಾಶ್ತ್ರʼ ʻಮಕ್ಕಳ ಸರ್ಜರಿʼ, ʻಮಕ್ಕಳ ನೇತ್ರಶಾಸ್ತ್ರ, ಮಕ್ಕಳ ಮನೋವೈದ್ಯಕೀಯಶಾಸ್ತ್ರ, ಮಕ್ಕಳ ದಂತಚಿಕಿತ್ಸೆ ಇತ್ಯಾದಿ ಇವುಗಳಲ್ಲಿ ಸೇರಿವೆ.
ಈ ಪ್ರಕರಣವು ಸಮಯೋಚಿತ ರೋಗನಿರ್ಣಯ ಮತ್ತು ಮಧ್ಯಸ್ಥಿಕೆಯ ಮಹತ್ವವನ್ನು ಒತ್ತಿಹೇಳುತ್ತದೆ, ಜೊತೆಗೆ ʻಬುಡ್-ಚಿಯಾರಿ ಸಿಂಡ್ರೋಮ್ʼ ಮತ್ತು ಮೂರ್ಛೆರೋಗದಂತಹ ಸಂಕೀರ್ಣ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ಬಹು ವಿಭಾಗದ ತಂಡದ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ. ಮಾಸ್ಟರ್ ಕ್ರಿಶ್ ಚೇತರಿಕೆಯು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯ ಶ್ರೇಷ್ಠತೆ ಮತ್ತು ರೋಗಿಗಳ ಆರೈಕೆಯಲ್ಲಿ ಅನುಸರಿಸುವ ಸಮಗ್ರ ಕಾರ್ಯವಿಧಾನಕ್ಕೆ ಸಾಕ್ಷಿಯಾಗಿದೆ.
ಆರೋಗ್ಯ ರಕ್ಷಣೆಯ ಪ್ರವರ್ತಕ ಸಂಸ್ಥೆಯಾಗಿರುವ, ʻಮಣಿಪಾಲ್ ಹಾಸ್ಪಿಟಲ್ಸ್ʼ, ವಾರ್ಷಿಕವಾಗಿ 7 ದಶಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸುವ ಭಾರತದ ಅತ್ಯುನ್ನತ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ ಒಂದೆನಿಸಿದೆ. ಮಲ್ಟಿಸ್ಪೆಷಾಲಿಟಿ ಮತ್ತು ತೃತೀಯ ಶ್ರೇಣಿಯ ಆರೈಕೆ ಮೂಲಕ ಕೈಗೆಟುಕುವ, ಉತ್ತಮ ಗುಣಮಟ್ಟದ ಆರೋಗ್ಯಸೇವಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಆಸ್ಪತ್ರೆಯ ಹೊರಗಿನ ಆರೈಕೆಗೂ ಅದನ್ನು ವಿಸ್ತರಿಸುವುದರತ್ತ ಸಂಸ್ಥೆಯು ಗಮನ ಹರಿಸುತ್ತದೆ.
ʻಮೆಡಿಕಾ ಸೈನರ್ಜಿ ಹಾಸ್ಪಿಟಲ್ಸ್ʼ ಮತ್ತು ʻಎಎಂಆರ್ಐ ಹಾಸ್ಪಿಟಲ್ಸ್ ಲಿಮಿಟೆಡ್ʼ ಸ್ವಾಧೀನ ಪೂರ್ಣಗೊಂಡ ನಂತರ(2023ರ ಸೆಪ್ಟೆಂಬರ್ನಲ್ಲಿ ಸ್ವಾಧೀನ), ಮಣಿಪಾಲ್ ಹಾಸ್ಪಿಟಲ್ಸ್ನ ಸಂಯೋಜಿತ ಆಸ್ಪತ್ರೆಗಳ ಜಾಲವು ಇಂದು 19 ನಗರಗಳಲ್ಲಿ 10,500ಕ್ಕೂ ಹಾಸಿಗೆಗಳು, 5,600ಕ್ಕೂ ಹೆಚ್ಚು ಪ್ರತಿಭಾವಂತ ವೈದ್ಯರು ಮತ್ತು 18,600ಕ್ಕೂ ಹೆಚ್ಚು ಉದ್ಯೋಗಿಗಳ ಸಾಮರ್ಥ್ಯವನ್ನು ಹೊಂದಿರುವ 37 ಆಸ್ಪತ್ರೆಗಳ ಪ್ಯಾನ್- ಇಂಡಿಯಾ ಹೆಜ್ಜೆಗುರುತನ್ನು ಹೊಂದಿದೆ.
ಮಣಿಪಾಲ್ ಹಾಸ್ಪಿಟಲ್ಸ್ ಪ್ರಪಂಚದಾದ್ಯಂತ ವೈವಿಧ್ಯಮಯ ರೋಗಿಗಳಿಗೆ ಸಮಗ್ರ ರೋಗಶಮನ ಮತ್ತು ತಡೆಗಟ್ಟುವಿಕೆ ಸೇವೆಯನ್ನು ಒದಗಿಸುತ್ತವೆ. ಮಣಿಪಾಲ್ ಹಾಸ್ಪಿಟಲ್ಸ್ ʻಎನ್ಎಬಿಎಚ್ʼ, ʻಎಎಎಚ್ಆರ್ಪಿಪಿʼ ಮಾನ್ಯತೆ ಪಡೆದಿದೆ ಮತ್ತು ಅದರ ಜಾಲದಲ್ಲಿರುವ ಹೆಚ್ಚಿನ ಆಸ್ಪತ್ರೆಗಳು ʻಎನ್ಎಬಿಎಲ್ʼ, ʻಇಆರ್ʼ, ʻಬ್ಲಡ್ ಬ್ಯಾಂಕ್ʼ ಮಾನ್ಯತೆ ಪಡೆದಿವೆ ಜೊತೆಗೆ, ನರ್ಸಿಂಗ್ ಉತ್ಕೃಷ್ಟತೆಗಾಗಿ ಗುರುತಿಸಲ್ಪಟ್ಟಿದೆ. ವಿವಿಧ ಗ್ರಾಹಕ ಸಮೀಕ್ಷೆಗಳಲ್ಲಿ ಭಾರತದ ಅತ್ಯಂತ ಗೌರವಾನ್ವಿತ ಮತ್ತು ರೋಗಿ ಶಿಫಾರಸು ಮಾಡಿದ ಆಸ್ಪತ್ರೆಯಾಗಿ ʻಮಣಿಪಾಲ್ ಹಾಸ್ಪಿಟಲ್ಸ್ʼ ಗುರುತಿಸಲ್ಪಟ್ಟಿದೆ.