Ad

ಮಂಗಳೂರು: ಕೆಎಂಸಿ ಆಸ್ಪತ್ರೆ ಅತ್ತಾವರ ಉಚಿತ ವಿಟಿಲಿಗೋ ಸಮಾಲೋಚನಾ ಶಿಬಿರ

Kmc (7)

ಮಂಗಳೂರು: ಜೂನ್ 25 ರ ವಿಶ್ವ ವಿಟಿಲಿಗೋ ದಿನಾಚರಣೆಯ ನಿಮಿತ್ತ, ಕೆಎಂಸಿ ಆಸ್ಪತ್ರೆ ಅತ್ತಾವರದ ಚರ್ಮರೋಗ ವಿಭಾಗವು ಜೂನ್ 25 ರಿಂದ ಜುಲೈ 1, 2024 ರವರೆಗೆ ಒಂದು ವಾರದ ವಿಟಿಲಿಗೋ ಶಿಬಿರವನ್ನು ಆಯೋಜಿಸುತ್ತಿದೆ. ಶಿಬಿರವು ಪ್ರತಿದಿನ ಬೆಳಗ್ಗೆ 9:00 ರಿಂದ ಸಂಜೆ 4:00 ರವರೆಗೆ ನಡೆಯುತ್ತದೆ.

Ad
300x250 2

ವಿಟಿಲಿಗೋ ಎಂಬುದು ಚರ್ಮದ ಬಣ್ಣವನ್ನು ಕಳೆದುಕೊಳ್ಳುವ ಚರ್ಮದ ಸ್ಥಿತಿಯಾಗಿದೆ. ಈ ಸ್ಥಿತಿಯು ದೇಹದ ಯಾವುದೇ ಭಾಗದ ಚರ್ಮವನ್ನು ಬಾಧಿಸಬಹುದು. ವಿಟಿಲಿಗೋ ಒಂದು ಸಾಂಕ್ರಾಮಿಕವಲ್ಲದ ಚರ್ಮದ ಸ್ಥಿತಿಯಾಗಿದೆ.

ಚಿಕಿತ್ಸೆಯಿಂದ ಪೀಡಿತ ಚರ್ಮಕ್ಕೆ ಬಣ್ಣವನ್ನು ಪುನಃಸ್ಥಾಪಿಸಬಹುದು. ಈ ಶಿಬಿರವು ವಿಟಿಲಿಗೋ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಮತ್ತು ವಿಟಿಲಿಗೋ ಪೀಡಿತರಿಗೆ
ಬೆಂಬಲವನ್ನು ನೀಡಲು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಚರ್ಮರೋಗ ತಜ್ಞರೊಂದಿಗೆ ಉಚಿತ ಸಮಾಲೋಚನೆ ಲಭ್ಯವಿದ್ದು, ಫೆÇೀಟೋಥೆರಪಿ ಚಿಕಿತ್ಸೆಯ ಮೇಲೆ 30% ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ರೋಗನಿರ್ಣಯ ಅಥವಾ ಚಿಕಿತ್ಸೆಯ ಆಯ್ಕೆಗಳನ್ನು ಹುಡುಕುತ್ತಿರುವ ವಿಟಿಲಿಗೋದಿಂದ ಬಳಲುತ್ತಿರುವ ವ್ಯಕ್ತಿಗಳು, ವಿಟಿಲಿಗೋ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಸಕ್ತಿ
ಇರುವವರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಅಪಾಯಿಂಟ್‍ಮೆಂಟ್‍ಗಾಗಿ 70220 78002 ನ್ನು ಸಂಪರ್ಕಿಸಿ.

Ad
Ad
Nk Channel Final 21 09 2023
Ad