ಮಂಗಳೂರು : ಕೊನೆಗೂ ಬಿಜೆಪಿಯಿಂದ ಪರಿಷತ್ ಚುನಾವಣೆಗೆ ಅಭ್ಯರ್ಥಿ ಫೈನಲ್ ಮಾಡಲಾಗಿದ್ದು ಅಚ್ಚರಿ ಎಂಬಂತೆ ಪರಿಷತ್ ಚುನಾವಣೆ ಬಿಜೆಪಿಯಿಂದ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಗೆ ಪರಿಷತ್ ಟಿಕೆಟ್ ಫೈನಲ್ ಮಾಡಲಾಗಿದೆ.
ದಕ್ಷಿಣ ಕನ್ನಡ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಕಿ ಶೋರ್ ಕುಮಾರ್ ಪುತ್ತೂರು ಅವರು ಪರಿಷತ್ ಚುನಾವಣೆಗೆ ಆಯ್ಕೆಯಾಗಿದ್ದಾರೆ. ಹಲವು ಘಟಾನುಘಟಿ ಅಕಾಂಷಿಗಳ ನಡುವೆ ಕಿಶೋರ್ ಕುಮಾರ್ ಗೆ ಅವಕಾಶ ಒಲಿದಿದೆ.ನಳಿನ್ ಕುಮಾರ್ ಕಟೀಲ್ ,ಪ್ರಮೋದ್ ಮಧ್ವರಾಜ್ ಸೇರಿದಂತೆ ಹಲವರಿಂದ ಟಿಕೆಟ್ ಗಾಗಿ ಲಾಭಿ ಸಿಕ್ಕಿದೆ. ಈ ನಡುವೆ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಇದೀಗ ಬಿಜೆಪಿ ಅಖಾಡಕ್ಕಿಳಿಸಿದೆ.
Ad