ಪುತ್ತೂರು: ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಬರೀ ಕೈಯಲ್ಲಿ ಸ್ನೇಕ್ ಝಕಾರಿಯಾ ಹಿಡಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.
ನೆಲ್ಯಾಡಿಯ ಮನೆಯೊಂದರ ಬಳಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿತ್ತು. ಸ್ಥಳೀಯರು ಉಪ್ಪಿನಂಗಡಿಯ ಸ್ನೇಕ್ ಝಕಾರಿಯಾಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಝಕಾರಿಯಾ ಹರಸಾಹಸ ಪಟ್ಟು ಕಾಳಿಂಗವನ್ನು ಹಿಡಿದಿದ್ದಾರೆ.
ಈ ವೇಳೆ ಹಾವು ಹಲವು ಭಾರೀ ಅವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದೆ. ಬರೀ ಕೈಯಲ್ಲಿ ಯಾವುದೇ ರೀತಿಯ ಸಲಕರಣೆ ಇರದೆ ಅಪಾಯಕಾರಿ ರೀತಿಯಲ್ಲಿ ಕಾಳಿಂಗವನ್ನು ಸ್ನೇಕ್ ಝಕಾರಿಯಾ ಹಿಡಿದಿದ್ದು. ಬಳಿಕ ಕಾಳಿಂಗ ಸರ್ಪವನ್ನು ಕಾಡಿನೊಳಗೆ ಬೀಡಲಾಗಿದೆ.
Ad