ಮಂಗಳೂರು: ಕಳೆದ 35 ವರ್ಷಗಳಿಂದ ಐಟಿ- ಬಿಟಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಮುಡಿಪು ಕುರ್ನಾಡ್ ನಿವಾಸಿ ಚಂದ್ರ ಶೇಖರ್ ನಾಯಕ್ ಅವರಿಗೆ ಕರ್ನಾಟಕ ಸರ್ಕಾರ ಕೊಡಮಾಡುವ ಹೊರದೇಶ – ಹೊರನಾಡು ವಿಭಾಗದಲ್ಲಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಜಿಲ್ಲೆಗೆ ಹೆಮ್ಮೆ ತಂದಿದೆ. ಮೂಲತ ಮಂಗಳೂರಿನ ಮುಡಿಪು ನಿವಾಸಿ ಚಂದ್ರಶೇಖರ್ ನಾಯಕ್ ಅವರ ಈ ಕ್ಷೇತ್ರದ ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚಿನ ಸೇವೆಯನ್ನು ಗುರುತಿಸಿರುವ ರಾಜ್ಯ ಸರಕಾರ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ಅಪೂರ್ವ ಸಂತಷ ತಂದಿದೆ ಎಂದು ಚಂದ್ರಶೇಖರ್ ನಾಯಕ್ ಹೇಳಿದರು.
ಇನ್ನೂ ಕಳೆದ ಅನೇಕ ವರ್ಷಗಳಿಂದ ದೂರದ ಅಮೆರಿಕಾದಲ್ಲಿ ನೆಲೆಸಿರುವ ಚಂದ್ರಶೇಖರ್ ನಾಯಕ್ ಶಿಕ್ಷಣ ಪೂರ್ಣಗೊಳಿಸಿದ್ದು ಮಂಗಳೂರಿನಲ್ಲಿ ಉನ್ನತ ಶಿಕ್ಷಣವನ್ನು ಅಮೇರಿಕಾದಲ್ಲಿ ಪಡೆದು ಬಳಿಕ ಐಟಿ ಉದ್ಯೋಗದ ಮೂಲಕ ಇಂದು ದೇಶ ವಿದೇಶದಲ್ಲಿ ತಮ್ಮ ಕಂಪನಿಯ ಮೂಲಕ ೧೬೦೦ ಅಧಿಕ ಯುವ ಪೀಳಿಗೆಗೆ ಉದ್ಯೋಗ ಒದಗಿಸಿದ್ದಾರೆ. ಇದರೊಂದಿಗೆ ಐಟಿ ಉದ್ಯಮಕ್ಕೆ ಅವಕಾಶವಿದು ಉತ್ತಮ ಸ್ಥಳವಾಗಿದ್ದು, ವಿಫುಲ ಅವಕಾಶವಿದೆ ಎಂದು ಚಂದ್ರಶೇಖರ ನಾಯಕ್ ಹೇಳಿದರು.
ಅಮೆರಿಕಾದಲ್ಲಿ ನೆಲೆಸಿರುವ ಚಂದ್ರಶೇಖರ ನಾಯಕ್ ಊರನ್ನು ಎಂದೂ ಮರೆತವರಲ್ಲ. ತಾಯ್ನಾಡಿಗೆ ಏನಾದರೂ ಮಾಡಬೇಕೆಂಬ ಹಂಬಲ ಅವರಲ್ಲಿದೆ. ಜ್ಞಾನಾರ್ಜನೆ, ಸತತ ಪರಿಶ್ರಮ ಮತ್ತು ಛಲ ಇದ್ದರೆ ಸಾಧನೆ ಶಿಖರ ಏರಬಹುದು ಎನ್ನುದು ಇವರ ಅಛಲ ನಂಬಿಕೆ.