ಮಂಗಳೂರು: ಕಂಚಿ ಕಾಮಕೋಟಿ ಪೀಠಾಧಿಪತಿ ಪೂಜ್ಯ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್16 ತನಕ ವಾಸ್ತವ್ಯ ಹೂಡಿದ್ದಾರೆ. ಗುರುವಾರ ಧರ್ಮಸ್ಥಳದಲ್ಲಿ ಅನ್ನಪೂರ್ಣ ಮೇಲಂತಸ್ತಿನಲ್ಲಿ ನೂತನವಾಗಿ ನಿರ್ಮಿಸಿರುವ ಭೋಜನಾಲಯವನ್ನು ಪೂಜ್ಯ ಸ್ವಾಮೀಜಿಯವರು ಉದ್ಘಾಟಿಸಿ ಆಶೀವರ್ಚನ ನೀಡಿ ಶುಭಹಾರೈಸಿದರು.
Ad
ಇದೇ ಸಂದರ್ಭದಲ್ಲಿ ಶ್ರೀಗಳನ್ನು ಮಂಗಳೂರು ಪತ್ರಕರ್ತರು ಭೇಟಿಯಾದರು ಈ ವೇಳೆ 20 ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕ್ಷಣವನ್ನು ನೆನಪಿಸಿದರು.ಬಳಿಕ ಪತ್ರಕರ್ತರಾದ ಅನುಶ್ ಕೊಟ್ಟಾರಿ, ಶ್ರೀನಿವಾಸ್ ಇಂದಾಜೆ,ಶಶಿಧರ್ ಪೊಯ್ಯತ್ತಬೈಲ್, ಶ್ರವಣ್ ಕುಮಾರ್ ರನ್ನು ಶ್ರೀಗಳು ಶಾಲು ಹೊದಿಸಿ, ಕಂಚಿ ಕಾಮಕೋಟಿ ದೇವರ ಬೆಳ್ಳಿ ಪದಕ ನೀಡಿ ಶುಭಹಾರೈಸಿದರು.
Ad
Ad