ಕಟೀಲು: ಶ್ರೀ ಕಟೀಲು ಮೇಳದಲ್ಲಿ ನಿರಂತರ 35 ವರ್ಷ ಗಳಿಂದ ಕಲಾ ಸೇವೆ ಗೈಯುತ್ತಿರುವ ಬಣ್ಣದ ವೇಷಧಾರಿ ಶ್ರೀ ನಗ್ರಿ ಮಹಾಬಲ ರೈ ಅವರಿಗೆ ಕದ್ರಿ ಯಕ್ಷ ಬಳಗ ವು ” ಕದ್ರಿ ವಿಷ್ಣು ಪ್ರಶಸ್ತಿ -2024″.ನೀಡಿ ಗೌರವಿಸಲಿದೆ.
ಇಚ್ಲಂಪಾಡಿ, ಕೂಡ್ಲು,ಕೊರಕೋಡು, ಅಡೂರು, ಕುಂಡಾವು, ಕದ್ರಿ,ಧರ್ಮಸ್ಥಳ,ಕಟೀಲು ಮೇಳಗಳಲ್ಲಿ ತೆಂಕು ತಿಟ್ಟಿನ ರಾಜಕಿರೀಟ ವೇಷದಲ್ಲಿ ಅಪೂರ್ವ ಸಾಧನೆ ಗೈದಿದ್ದ, ಅರ್ಜುನ, ಋತುಪರ್ಣ, ಇಂದ್ರಜಿತು,ಹಿರಣ್ಯಾಕ್ಷ ಮೊದಲಾದ ಪಾತ್ರಗಳಲ್ಲಿ ಮೆರದಿದ್ದ ಮೇರು ಕಲಾವಿದ ಕದ್ರಿ ವಿಷ್ಣು ಸಂಸ್ಮರಣೆಯು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಭಾಗಿತ್ವದಲ್ಲಿ ನಡೆಯಲಿದೆ.
ನವೆಂಬರ್ 26 ಮಂಗಳವಾರ ಶ್ರೀ ಕ್ಷೇತ್ರ ಕದ್ರಿಯಲ್ಲಿ ಶ್ರೀ ಕಟೀಲು ಮೇಳದ ಸೇವೆ ಆಟದಂದು “ಕದ್ರಿ ವಿಷ್ಣು ಪ್ರಶಸ್ತಿ-2024 ‘ಪ್ರದಾನ ಮಾಡಲಾಗುವುದು. ಸುಬ್ರಮಣ್ಯ, ಧರ್ಮಸ್ಥಳ ಹಾಗೂ ಕಟೀಲು ಮೇಳಗಳಲ್ಲಿ ಒಟ್ಟು ಐದುವರೆ ದಶಕಗಳಿಂದ ತೆಂಕುತಿಟ್ಟಿನ ಪರಂಪರೆಯ ಬಣ್ಣದ ವೇಷಧಾರಿಯಾಗಿ ಯಕ್ಷ ಕಲಾ ಯಾನ ವನ್ನು ಮುನ್ನಡೆಸುತ್ತಿರುವ ನಗ್ರಿ ಅವರು ಕಟೀಲು ಮೇಳದಲ್ಲಿ ನಿರಂತರ 34 ತಿರುಗಾಟವನ್ನು ಪೂರೈಸಿದ್ದಾರೆ.
ಶ್ರೀ ದೇವಿ ಮಹಾತ್ಮೆಯ ಮಹಿಷಾಸುರ ಪಾತ್ರ ನಿರ್ವಹಣೆ ಯಲ್ಲಿ ಸಿದ್ದಿ ಪ್ರಸಿದ್ದಿ ಪಡೆದಿದ್ದಾರೆ. ನವೆಂಬರ್ 26 ಮಂಗಳವಾರ ಶ್ರೀ ಕ್ಷೇತ್ರ ಕದ್ರಿ ಯಲ್ಲಿ ನಡೆಯುವ ಶ್ರೀ ಕಟೀಲು ಮೇಳ ದ ಸೇವೆ ಬಯಲಾಟದ ವೇದಿಕೆ ಯಲ್ಲಿ ಕಾರ್ಯಕ್ರಮ ಜರಗಲಿದೆ.