Bengaluru 23°C
Ad

ಮಂಗಳೂರು: ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

 ಸೆಂಟ್ರಲ್ ಇಂಡಸ್ಟ್ರಿಯಲ್ (CISF) canine squad ಭಾಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ 12 ವರ್ಷದ ಲ್ಯಾಬ್ರಡಾರ್ ತಳಿಯ ಶ್ವಾನ ಜಾಕ್‌ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶುಕ್ರವಾರ(ನ22) ಭಾವನಾತ್ಮಕ ವಿದಾಯ ಹೇಳಿದೆ.

ಮಂಗಳೂರು: ಸೆಂಟ್ರಲ್ ಇಂಡಸ್ಟ್ರಿಯಲ್ (CISF) canine squad ಭಾಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ 12 ವರ್ಷದ ಲ್ಯಾಬ್ರಡಾರ್ ತಳಿಯ ಶ್ವಾನ ಜಾಕ್‌ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಶುಕ್ರವಾರ(ನ22) ಭಾವನಾತ್ಮಕ ವಿದಾಯ ಹೇಳಿದೆ.

Ad

ಜ್ಯಾಕ್ ತನ್ನ 13 ನೇ ಹುಟ್ಟುಹಬ್ಬ ಆಚರಿಸಿ ಮೂರು ದಿನಗಳಲ್ಲಿ ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಂದಾಗಿ ಕೊನೆಯುಸಿರೆಳೆದಿದೆ. ನಿಷ್ಠೆ ಮತ್ತು ಸಮರ್ಪಣೆ ಮೂಲಕ ಎಲ್ಲರ ಮೆಚ್ಚಿನ ಶ್ವಾನವಾಗಿತ್ತು. ಜ್ಯಾಕ್ ಒಂದು ದಶಕದ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ CISF ನ K9 ತಂಡವನ್ನು ಸೇರಿಕೊಂದಿತ್ತು.

Ad

ಬಹಳ ಬೇಗನೆ ಭದ್ರತಾ ತಂಡದ ಅಮೂಲ್ಯ ಸದಸ್ಯನಾಗಿತ್ತು. ತೀಕ್ಷ್ಮವಾದ ಪ್ರವೃತ್ತಿ ಮತ್ತು ದಣಿವರಿಯದ ಕೆಲಸಕ್ಕೆ ಹೆಸರುವಾಸಿಯಾದ ಜ್ಯಾಕ್ ವಿಮಾನ ನಿಲ್ದಾಣದ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಚಲ ಸೇವೆಯು ಜಾಕ್ ಸಿಐಎಸ್ಎಫ್ ಸಿಬಂದಿ ಮತ್ತು ವಿಮಾನ ನಿಲ್ದಾಣದ ಸಿಬಂದಿಗಳಿಗೆ ಅಚ್ಚುಮೆಚ್ಚಿನ ಶ್ವಾನವಾಗಿತ್ತು.

Ad

ಡೆಪ್ಯುಟಿ ಕಮಾಂಡೆಂಟ್. ಎಸ್. ಎಂ. ಮೈತೇಯ್ ನೇತೃತ್ವದ ಸಿಐಎಸ್‌ಎಫ್ ತಂಡವು ಜ್ಯಾಕ್ ಸೇವೆಗೆ ಸೂಕ್ತವಾದ ಗೌರವವನ್ನು ನೀಡಿ ಅಂತಿಮ ನಮನ ಸಲ್ಲಿಸಿದರು. ಸಿಐಎಸ್‌ಎಫ್ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜ್ಯಾಕ್ ಸೇವೆಗೆ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದೆ.

Ad

ವಿಮಾನ ನಿಲ್ದಾಣದ ಭದ್ರತೆಗೆ ಅವರು ನೀಡಿದ ಅಪ್ರತಿಮ ಕೊಡುಗೆಗಾಗಿ ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.ಜ್ಯಾಕ್ ನ ಬದ್ಧತೆ ಮತ್ತು ಪರಂಪರೆಯು ಸಿಐಎಸ್ಎಫ್ ಶ್ವಾನದಳಕ್ಕೆ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಕ್ಷಿಸಲು ಸಮರ್ಪಿತವಾಗಿರುವ ಎಲ್ಲರಿಗೂ ಸ್ಫೂರ್ತಿ ಎಂದು ಹೇಳಿದ್ದಾರೆ.

Ad
Ad
Ad
Nk Channel Final 21 09 2023