ಮಂಗಳೂರು: ಕುಮಾರ ಸ್ವಾಮಿ ಬಗ್ಗೆ ಜಮೀರ್ ಹೇಳಿಕೆ ವಿಚಾರವಾಗಿ ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಕುಮಾರಸ್ವಾಮಿ ಬಗ್ಗೆ ಜಮೀರ್ ಹೇಳಿಕೆ ಸರಿಯಲ್ಲ ಎಂದರು.
Ad
ಅವರು ಕೆಲವೊಮ್ಮೆ ಆಡು ಭಾಷೆಯಲ್ಲಿ ಮಾತನಾಡುತ್ತಾರೆ. ಸಾರ್ವಜನಿಕವಾಗಿ ಆ ರೀತಿ ಮಾತನಾಡಬಾರದು. ಜಮೀರ್ ಮಾತು ಚುನಾವಣೆ ಮೇಲೆ ಏನು ಪರಿಣಾಮ ಬೀರುತ್ತೊ ಗೊತ್ತಿಲ್ಲ ಎಂದರು.ನಾನು ಚೆನ್ನಪಟ್ಟಣದಲ್ಲಿದ್ದೆ, ಜಮೀರ್ ಅವರ ಬಗ್ಗೆ ಎಲ್ಲರಿಗೆ ಗೊತ್ತಿದೆ.
Ad
ಖಂಡಿತವಾಗಿ ನಾವು ಗೆಲ್ಲುತ್ತೇವೆ, ಚುನಾವಣೆ ಮೇಲೆ ಅಂತಃ ಪರಿಣಾಮ ಬೀರೋದಿಲ್ಲ. ತಮ್ಮ ಹೇಳಿಕೆಗೆ ಜಮೀರ್ ಅವರೂ ವಿಷಾದ ವ್ಯಕ್ತ ಪಡಿಸಿದರು. ಅದೇನು ಅಂತಹ ದೊಡ್ಡ ವಿಚಾರ ಅಲ್ಲ. ಆದರೆ ಸಾರ್ವಜನಿಕ ವಲಯದಲ್ಲಿ ನಾವು ಏನು ಮಾತನಾಡುತ್ತೇವೊ ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಬೇಕು.
Ad
ಈ ಬಗ್ಗೆ ಜಮೀರ್ ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಆದರೆ ನಾವು ಯಾರ ಬಗ್ಗೆಯೂ ವೈಯುಕ್ತಿಕವಾಗಿ ಮಾತನಾಡಬಾರದು. ನನಗೆ ಗೊತ್ತಿರುವ ಹಾಗೆ ಜಮೀರ್ ಮಾತು ಚುನಾವಣೆ ಮೇಲೆ ಅಂತಹ ಪರಿಣಾಮ ಬೀರೋದಿಲ್ಲ ಎಂದರು.
Ad
Ad