ಮಂಗಳೂರು: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಇನ್ನು ಮಂಗಳೂರಿನಲ್ಲಿ ಕಾರ್ಯಕರ್ತರು ಹೈಡ್ರಾಮಾ ನಡೆಸುತ್ತಿದ್ದಾರೆ. ಬಸ್ಸಿಗೆ ಕಲ್ಲು ತೂರಾಟ ನಡೆಸಿದ್ದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಮಂಗಳೂರಿನ ಲಾಲ್ ಬಾಗ್ ವೃತ್ತದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತದೆ. ಇಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಹಿಂಸೆಗಿಳಿದಿದ್ದಾರೆ.
ರಾಜ್ಯಪಾಲರನ್ನು ಕಿತ್ತು ಹಾಕಲು ಬಾಂಗ್ಲಾ ರೀತಿ ಮಾಡ್ತೀವಿ ಎಂದು ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಐವಾನ್ ಡಿಸೋಜ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕಾರ್ಯಕರ್ತರಿಂದ ಕಿಡಿಗೇಡಿ ಕೃತ್ಯ ಆರಂಭಗೊಂಡಿದೆ.
Congress workers blocked Lalbagh road in Mangaluru and burnt tyres in protest against Karnataka Governor's consent to prosecute CM Siddaramaiah in alleged MUDA scam@XpressBengaluru @vinndz_TNIE @INCKarnataka @DKDistrictCong1 pic.twitter.com/pLKMBYWUKR
— Divya Cutinho_TNIE (@cutinha_divya) August 19, 2024