Bengaluru 23°C
Ad

ಖಬರಸ್ತಾನಗಳಿಗೂ ಸರ್ಕಾರಿ ಭೂಮಿ ಮಂಜೂರಾತಿಗೆ ಮುಂದಾಯ್ತಾ ಸರ್ಕಾರ?

ಖಬರಸ್ತಾನಗಳಿಗೆ ಸರ್ಕಾರಿ ಭೂಮಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದಲೇ ಆದೇಶ ನೀಡಲಾಗಿದ್ದು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾಗೆ ಸಿಎಸ್ ಶಾಲೀನಿ ರಜನೀಶ್ ಆದೇಶ ನೀಡಿದ್ದಾರೆ.

ಮಂಗಳೂರು: ಖಬರಸ್ತಾನಗಳಿಗೆ ಸರ್ಕಾರಿ ಭೂಮಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದಲೇ ಆದೇಶ ನೀಡಲಾಗಿದ್ದು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾಗೆ ಸಿಎಸ್ ಶಾಲೀನಿ ರಜನೀಶ್ ಆದೇಶ ನೀಡಿದ್ದಾರೆ.

Ad

2024ರ ಎಪ್ರಿಲ್ ನಲ್ಲೇ ಸಿಎಸ್ ಶಾಲೀನಿ ರಜನೀಶ್ ಸುತ್ತೋಲೆ ಹೊರಡಿಸಿದ್ದಾರೆ. ಆದೇಶ ಹೊರಡಿಸುವ ವೇಳೆ ಶಾಲೀನಿ ರಜನೀಶ್ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದರು. ರಾಜ್ಯದ 328 ಖಬರಸ್ತಾನಗಳಿಗೆ ಸುಮಾರು 2750 ಎಕರೆ ಕಂದಾಯ ಭೂಮಿ ಮಂಜೂರಾತಿ ಅನುಮಾನ.

Ad

ಆರು ತಿಂಗಳ ಹಿಂದಿನ ಆದೇಶದ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಭೂಮಿ ಹಂಚಿಕೆಯಾಗಿದೆ.ದ.ಕ, ಉಡುಪಿ ಸೇರಿದಂತೆ ರಾಜ್ಯದ ಹಲವಡೆ ಖಬರಸ್ತಾನಗಳಿಗೆ ಸರ್ಕಾರಿ ಭೂಮಿ ಹಂಚಿಕೆ ಅನುಮಾನ.
ವಕ್ಫ್ ಅಧೀನದ ಮಸೀದಿ, ಪ್ರಾರ್ಥನಾ ಮಂದಿರದ ಅಧೀನದಲ್ಲಿರುವ ಖಬರಸ್ತಾನಗಳಿಗೆ ಸರ್ಕಾರಿ ಜಮೀನು ಮಂಜೂರಾತಿಯಾಗಿದೆ.

Ad

ರಾಜ್ಯ ಮಟ್ಟದ ವಕ್ಫ್ ಆಸ್ತಿಗಳ ಕಾರ್ಯಪಡೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ನಿರ್ಧಾರವಾಗಲಿದೆ. ಜೊತೆಗೆ ಕಂದಾಯ ಇಲಾಖೆಯಲ್ಲಿ 21,767 ವಕ್ಸ್ ಆಸ್ತಿಗಳ ಖಾತೆ ಬದಲಾವಣೆಗೂ ಸೂಚನೆ ನೀಡಲಾಗಿದೆ. ಸಿಎಸ್ ಶಾಲಿನಿ ರಜನೀಶ್ ಆದೇಶಕ್ಕೆ ಕಂದಾಯ ಇಲಾಖೆ ಸಮ್ಮತಿ ನೀಡಿದೆ.

Ad

ದ.ಕ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಭೂ ಮಂಜೂರಾತಿ ಶುರುವಾಗಿದೆ. ಬೆಂಗಳೂರು, ರಾಯಚೂರು, ಕಲಬುರಗಿ, ಹಾಸನ, ದ.ಕ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಆರಂಭವಾಗಿದೆ. ಸ್ಥಳೀಯವಾಗಿ ಲಭ್ಯ ಸರ್ಕಾರಿ ಭೂಮಿಯನ್ನು ಖಬರಸ್ತಾನಗಳಿಗೆ ಕಂದಾಯ ಇಲಾಖೆ ಮಂಜೂರಾತಿ ಮಾಡಿದೆ.

Ad

ಭೂಮಿ ಲಭ್ಯವಿಲ್ಲದ ಕಡೆ ಇಲಾಖೆಯಿಂದ ಅಥವಾ ಸರ್ಕಾರದಿಂದ ಭೂಮಿ ಖರೀದಿಸಿ ಖಬರಸ್ಥಾನಗಳಿಗೆ ಕಾಯ್ದಿರಿಸಲು ಚಿಂತನೆ ನಡೆಸಲಾಗಿದೆ. ವಕ್ಫ್ ಇಲಾಖೆ ಮನವಿ ಹಿನ್ನೆಲೆಯಲ್ಲಿ ಖಬರಸ್ತಾನ ಭೂಮಿ ಮಂಜೂರಾತಿಗೆ ಸಿಎಸ್ ಆದೇಶ ನೀಡಿದೆ. ವಕ್ಫ್ ವಿವಾದದ ಮಧ್ಯೆಯೇ ಚರ್ಚೆಗೆ ಬಂದ ರಾಜ್ಯ ಸರಕಾರದ ಮತ್ತೊಂದು ನಡೆಯಾಗಿದೆ.

Ad

ರಾಜ್ಯದ ಹಲವು ದೇವಸ್ಥಾನಗಳಿಗೆ ಭೂಮಿ ಮಂಜೂರಾತಿಗೆ 2013ರಿಂದಲೇ ಪ್ರಸ್ತಾವನೆ ರಾಜ್ಯ ಧಾರ್ಮಿಕ ಪರಿಷತ್ ಸಲ್ಲಿಸಿದೆ. ಸಿ ಗ್ರೇಡ್ ದೇವಸ್ಥಾನಗಳ ಸರ್ಕಾರಿ ಜಾಗ ದೇವಸ್ಥಾನದ ಹೆಸರಿಗೆ ಮಾಡಲು ಪ್ರಸ್ತಾವನೆ ಮಾಡಲಾಗಿದೆ. ಆದರೆ ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ವಹಿಸಲಿಲ್ಲ.

Ad
Ad
Ad
Nk Channel Final 21 09 2023