Bengaluru 27°C

ಎಂ.ಸಿ.ಸಿ. ಬ್ಯಾಂಕಿನಲ್ಲಿ ಸ್ವಾತಂತ್ರ್ಯ ದಿನದ ಆಚರಣೆ; ದ್ವಜಾರೋಹಣ ನೆರವೇರಿಸಿದ ಶ್ರೀ ತಾರಾನಾಥ್ ಗಟ್ಟಿ

Mng (1)

ಮಂಗಳೂರು: ಎಂ.ಸಿ.ಸಿ. ಬ್ಯಾಂಕಿನಲ್ಲಿ ಆಗಸ್ಟ್ 15ರಂದು 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಿಲಾಗ್ರಿಸ್ ಚರ್ಚಿನ ಧರ್ಮಗುರುಗಳಾದ ವಂದನೀಯ ಬೊನವೆಂಚರ್ ನಜರೆತ್ ಇವರು ಪವಿತ್ರ ಬಲಿ ಪೂಜೆ ನೆರೆವೇರಿಸಿದರು. ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ್ ಗಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷ ಶ್ರೀ ಜೆರಾಲ್ ಜೂಡ್ ಡಿಸಿಲ್ವಾ, ಮಹಾಪ್ರಬಂಧಕ ಶ್ರೀ ಸುನಿಲ್ ಮಿನೇಜಸ್ ವೇದಿಕೆಯಲ್ಲಿದ್ದರು.
Whatsapp Image 2024 08 16 At 10.33.48 Am


ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಶ್ರೀ ತಾರಾನಾಥ್ ಗಟ್ಟಿ, ನಮ್ಮ ದೇಶದ 78ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆಯಲ್ಲಿ ಪ್ರಮುಖ ಸಹಕಾರಿ ಬ್ಯಾಂಕ್, ಎಂ.ಸಿ.ಸಿ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯೊಂದಿಗೆ ಭಾಗವಹಿಸಲು ಸಂತೋಷವಾಗುತ್ತಿದೆ. ಎಂ.ಸಿ.ಸಿ ಬ್ಯಾಂಕ್ ನೆಲೆ ನಿಂತಿರುವ ‘ಬಾವುಟಗಡ್ಡೆ’ ಪ್ರದೇಶ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪ್ರದೇಶವಾಗಿದ್ದು, ಇಲ್ಲಿನ ಅನೇಕ ಮಹನೀಯರು ತಮ್ಮ ತ್ಯಾಗ ಮತ್ತು ಬಲಿದಾನದಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ವಿವರಿಸಿದರು. ಭಾರತದ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ನಾಗರಿಕನೂ ಎತ್ತಿ ಹಿಡಿಯಬೇಕಾಗಿದೆ ಎಂದು ಕರೆ ನೀಡಿದರು.
Whatsapp Image 2024 08 16 At 10.34.08 Am


ಈ ಸಂಧರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಯವರು ದೇಶಭಕ್ತಿ ಗೀತೆಗಳನ್ನು ಹಾಡಿ ಸಭಿಕರಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸಿದರು. ಬ್ಯಾಂಕಿನ ಭದ್ರತಾ ಸಿಬ್ಬಂದಿಯಾಗಿ ಸುಮಾರು ಎರಡು ವರ್ಷ ಸೇವೆ ಸಲ್ಲಿಸಿ ಆಕಾಲಿಕವಾಗಿ ನಿಧನರಾದ ದಿವಂಗತ ಗೋಪಾಲಕೃಷ್ಣ ಗಟ್ಟಿಯವರಿಗೆ ಶೃದ್ದಾಂಜಲಿಯನ್ನು ಸಮರ್ಪಿಸಲಾಯಿತು. ಬ್ಯಾಂಕಿನ ವತಿಯಿಂದ ರೂ.25,೦೦೦/- ಆರ್ಥಿಕ ನೆರವನ್ನು ಅವರ ಕುಟುಂಬಸ್ಥರಿಗೆ ನೀಡಲಾಯಿತು.
Whatsapp Image 2024 08 16 At 10.33.48 Am (1)


ನಿರ್ದೇಶಕರಾದ ಡಾ| ಜೆರಾಲ್ಡ್ ಪಿಂಟೊ, ಆ್ಯಂಡ್ರು ಡಿಸೋಜ, ಅನಿಲ್ ಪತ್ರಾವೊ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಡೇವಿಡ್ ಡಿಸೋಜ, ಜೆ.ಪಿ. ರೊಡ್ರಿಗಸ್, ಸುಶಾಂತ್ ಸಿ. ಎ. ಸಲ್ಡಾನ್ಹಾ ಮತ್ತು ಕ್ಲೆಮೆಂಟ್ ಜಿ. ಪಿಂಟೊ, ಆಲ್ವಿನ್ ಪ್ರಶಾಂತ್ ಮೊಂತೇರೊ, ಫೆಲಿಕ್ಸ್ ಡಿಕ್ರೂಜ್, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಉಪ ಮಹಾಪ್ರಬಂಧಕ ರಾಜ್ ಎಫ್ ಮಿನೇಜಸ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಹಾಜರಿದ್ದರು.
Whatsapp Image 2024 08 16 At 10.33.49 Am (1)


ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾದ ಡೆರಿಲ್ ಲಸ್ರಾದೊ ನಿರೂಪಿಸಿದರು.


Nk Channel Final 21 09 2023