ಬಂಟ್ವಾಳ: ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಅಪಘಾತ ಸಂಭವಿಸಬಹುದಾದ ಸಾಧ್ಯತೆಗಳು ಹೆಚ್ಚು ಇರುವ ಬಸ್ ನಿಲ್ದಾಣದ ಬಳಿ ಅನಧಿಕೃತವಾಗಿ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾದರೂ ಯಾವುದೇ ಕ್ರಮಕೈಗೊಳ್ಳದ ಪುರಸಭೆ ಹಾಗೂ ಟ್ರಾಫಿಕ್ ಪೊಲೀಸರ ಬಗ್ಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.
ಶಾಸಕರ ವಿಶೇಷ ಮುತುವರ್ಜಿಯಿಂದ ಕೆಸರು ಮಣ್ಣು ತುಂಬಿ ನರಕಯಾತೆನೆಯಲ್ಲಿದ್ದ ಬಿಸಿರೋಡಿನ ಪ್ಲೈ ಓವರ್ ಕೆಳಭಾಗಕ್ಕೆ ಇಂಟರ್ ಲಾಕ್ ಅಳವಡಿಸಿ , ಸ್ವರೂಪವನ್ನು ಬದಲಿಸಿ ಸುಂದರ ಬಿಸಿರೋಡಾಗಿ ಪರಿವರ್ತನೆ ಮಾಡಲಾಗಿತ್ತು. ಆದರೆ ಯಾವಾಗ ಬಿಸಿರೋಡಿನ ಸ್ವರೂಪ ಬದಲಾಗಿ ಸುಂದರವಾದ ರೂಪವನ್ನು ಪಡೆಯಿತು. ಅದರ ಬೆನ್ನಲ್ಲೇ ಬೀದಿ ಬದಿ ವ್ಯಾಪಾರ ಮಾಡುವವರು ಹೆಚ್ಚಾದರು.
ಮುಂದೊಂದು ದಿನ ಸಾರ್ವಜನಿಕರು ನಡೆದಾಡಲೂ ಕಷ್ಟಕರ ಪರಿಸ್ಥಿತಿ ಬರಬಹುದಾದ ರೀತಿಯಲ್ಲಿ ಅಲ್ಲಲ್ಲಿ ತಲೆಎತ್ತುತಲೆ ಇವೆ. ರಾಷ್ಟ್ರೀಯ ಹೆದ್ದಾರಿಯಲ್ಲೇ ಬೀದಿ ಬದಿ ವ್ಯಾಪಾರಿಗಳು ಬೀಡುಬಿಟ್ಟಿದ್ದ ಕಾರಣಕ್ಕಾಗಿ ಗಿರಾಕಿಗಳು ರಸ್ತೆ ಮಧ್ಯೆ ಭಾಗದಲ್ಲಿ ವಾಹನ ನಿಲ್ಲಿಸಿ ಸಾಮಾಗ್ರಿಗಳನ್ನು ಪಡೆಯುವುದು ಅನಿವಾರ್ಯವಾಗಿದೆ.
ಇದು ಅಪಾಯಕಾರಿಯಾಗಿದ್ದು, ಯಾವ ಸಂದರ್ಭದಲ್ಲಿ ಅದರೂ ಅಪಘಾತ ಸಂಭವಿಸಿ ಪ್ರಾಣ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮೆಣಸು, ತರಕಾರಿ, ನರ್ಸರಿ, ಹಣ್ಷುಹಂಪಲು,ಬಟ್ಟೆ ಬರೆ ಹೀಗೆ ಸಣ್ಣ ಮಟ್ಟಿಗೆ ಮಹಲ್ ರೀತಿಯಲ್ಲಿ ವ್ಯಾಪಾರಗಳು ಇಲ್ಲಿ ನಿತ್ಯ ನಡೆಯುತ್ತಿದೆ. ಆದರೆ ಇವರ ಜೊತೆ ಲಕ್ಷಾಂತರ ರೂ ಡೆಪಾಸಿಟ್ ಇಟ್ಟು,ದುಬಾರಿ ಬಾಡಿಗೆ ನೀಡಿ ಅಂಗಡಿ ಪಡೆದು ವ್ಯಾಪಾರ ಮಾಡುವ ಅಂಗಡಿ ಮಾಲೀಕರು ವ್ಯಾಪಾರ ಇಲ್ಲದೆ ಸೊರಗಿದ್ದಾರೆ.