ಬಂಟ್ವಾಳ: ಮನುಷ್ಯನಿಗೆ ಜೀವಿತಾವಧಿಯಲ್ಲಿ ಉತ್ತಮ ಆರೋಗ್ಯ ಶಿಕ್ಷಣ ಮತ್ತು ಉದ್ಯೋಗ ಅಗತ್ಯ . ಹಾಗಾಗಿ ಅವುಗಳ ಕಡೆ ಗಮನ ಕೊಡುವುದು ವರ್ತಮಾನದ ಅಗತ್ಯ ಎಂದು ಶಾಸಕ ಅಶೋಕ ಕುಮಾರ್ ರೈ ಹೇಳಿದರು.
ಅವರು ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ2024-25 ಅನ್ನು ಉದ್ಘಾಟಿಸಿ ಮಾತನಾಡಿದರು ದಿನದ ಒಂದು ಗಂಟೆಯನ್ನು ಆರೋಗ್ಯ ರಕ್ಷಣೆಗಾಗಿ ಮೀಸಲಿಡಿ. ಶಾಲೆಯಲ್ಲಿ ಆಸಕ್ತಿಯಿಂದ ಆಟ ಪಾಠಗಳ ಕಡೆ ಗಮನಕೊಡಿ. ಮನೆಯಲ್ಲಿ ಕೂಡ ಶ್ರದ್ಧೆಯಿಂದ ಓದಿ ಉತ್ತಮ ಉದ್ಯೋಗ ಗಳಿಸಿ ಸ್ವಾವಲಂಬನೆಯ ಜೀವನ ನಡೆಸಿ ಎಂದು ಶಾಸಕರು ಹೇಳಿದರು
ಅಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಸಣ್ಣಗುತ್ತು ಪದ್ಮನಾಭ ಪೂಜಾರಿ, ಉಪಾಧ್ಯಕ್ಷೆ ಸರೋಜಿನಿ, ಶ್ರೀ ಸತ್ಯಸಾಯಿ ಲೋಕ ಸೇವಾ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮತ್ತು ಸಂಚಾಲಕ ಎಂ.ಚಂದ್ರಶೇಖರ ಭಟ್ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಘು ಟಿ. ವೈ. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಸ್. ಈಶ್ವರ ನಾಯ್ಕ್ ,
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ, ವಿವಿಧ ಶಿಕ್ಷಕ ಸಂಘಟನೆಗಳ ಪ್ರಮುಖರಾದ ಶಿವಪ್ರಸಾದ್ ರೈ, ಉಮಾನಾಥ ರೈ, ಜಯರಾಮ್ ಸೇರಿದಂತೆ ಹಲವರು ಈ ಸಂದರ್ಭ ಉಪಸ್ಥಿತರಿದ್ದರು. ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಬೆಳಗ್ಗೆ ಆರಂಭವಾಗಿದ್ದು, ಅಪರಾಹ್ನ ಶಾಸಕರು ಆಗಮಿಸಿದ ಬಳಿಕ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು.