Bengaluru 23°C

ಬಂಟ್ವಾಳ ಮಂಡಲದ ನೂತನ ಅಧ್ಯಕ್ಷರ ಪದ ಸ್ವೀಕಾರ ಹಾಗೂ ಅಭಿನಂದನಾ ಕಾರ್ಯಕ್ರಮ

ಬಂಟ್ವಾಳ ಮಂಡಲದ ನೂತನ ಅಧ್ಯಕ್ಷರ ಪದ ಸ್ವೀಕಾರ ಹಾಗೂ ಅಭಿನಂದನಾ ಕಾರ್ಯಕ್ರಮ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.

ಬಂಟ್ವಾಳ: ಬಂಟ್ವಾಳ ಮಂಡಲದ ನೂತನ ಅಧ್ಯಕ್ಷರ ಪದ ಸ್ವೀಕಾರ ಹಾಗೂ ಅಭಿನಂದನಾ ಕಾರ್ಯಕ್ರಮ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜತೆಯಾಗಿ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಅವರು ಪಕ್ಷವನ್ನು ಸಂಘಟನೆಯ ದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.


ಪ್ರಸ್ತುತ ದಿನಗಳಲ್ಲಿ ಬಿಜೆಪಿಯ ಸಹಕಾರಿ ಕ್ಷೇತ್ರಗಳ ಚುನಾವಣೆಯಲ್ಲಿ ಅತ್ಯುತ್ತಮ ಕರ್ತವ್ಯ ಮತ್ತು ಸಾಧನೆ ಮೂಲಕ ಗೆಲುವು ಸಾಧಿಸಿದ ಬಂಟ್ವಾಳದ ಬಿಜೆಪಿಯ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.


ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟದ ಸ್ಪರ್ಧೆ ಯಿರುವುದರಿಂದ ಸಂಘಟಿತ ಹೋರಾಟಕ್ಕೆ ಬಂಟ್ವಾಳದಲ್ಲಿ ಬಿಜೆಪಿ ಗೆ ಗೆಲುವು ನಿಶ್ಚಿತ ಎಂಬುದನ್ನು ಹಲವು ಚುನಾವಣೆಗಳು ನಮಗೆ ತಿಳಿಸಿದೆ. ಹಾಗಾಗಿ ಪ್ರತಿ ಚುನಾವಣೆಯನ್ನು ಸವಲಾಗಿ ಸ್ವೀಕರಿಸಿ ಎಂದು ಕಾರ್ಯಕರ್ತರಿಗೆ ತಿಳಿಸಿದರು ‌


ಮೋದಿಯವರ ಯೋಚನೆಯಂತೆ ನಾನು ಯೋಚಿಸಿದ್ದು, ರಾಜಕೀಯವಾಗಿ ಗುರುತಿಸಿಕೊಂಡಿರದ ಹೊಸದಾದ ಯುವ ನಾಯಕನನ್ನು ಮುಂದಿನ ದಿನಗಳಲ್ಲಿ ಬಂಟ್ವಾಳದಲ್ಲಿ ಶಾಸಕನಾಗಿ ಮಾಡುವ ನನ್ನ ಕನಸು ಆಗಿದ್ದು, ಈ ಕನಸು ನನಸು ಮಾಡಲು ನನಗೆ ಕ್ಷೇತ್ರದ ಕಾರ್ಯಕರ್ತರು ಬೆಂಬಲ ನೀಡಬೇಕು ಎಂದು ತಿಳಿಸಿದರು.


ನೂತನವಾಗಿ ಪದಸ್ವೀಕಾರ ಮಾಡಿದ ಚೆನ್ನಪ್ಪ ಕೋಟ್ಯಾನ್ ಹಾಗೂ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಅವರಿಗೆ ಅಭಿನಂದನೆ ಸಲ್ಲಿಸಿದರು. ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ಸವಾಲಿನ ಸಮಯದಲ್ಲಿ ಕೋಟ್ಯಾನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅವರ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಮುಖ ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧಿಸಿದ್ದೇವೆ.


ಕರ್ನಾಟಕದಲ್ಲಿರುವ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ನಾಚಿಕೆ ಮಾನ ಮರ್ಯಾದೆ ಬಿಟ್ಟು ಆಡಳಿತ ನಡೆಸುತ್ತಿದೆ. ರಾಹುಲ್ ಗಾಂಧಿಯವರ ಕೃಪಕಟಾಕ್ಷದಿಂದ, ಸಿದ್ದರಾಮಯ್ಯ ಅವರ ಬೆಂಬಲದಿಂದ ಕರ್ನಾಟಕದಲ್ಲಿ ಗೋಮಾತೆಯ ಕೆಚ್ಚಲನ್ನು ಕಡಿಯುವ ಕೆಲಸ ನಡೆಯುತ್ತಿದೆ.


ಸಿದ್ದರಾಮಯ್ಯ ಅವರು ರಾಜಕೀಯ ಆದರ್ಶಗಳನ್ನು ಮೀರಿ ಹಿಟ್ಲರ್,ಟಿಪ್ಪು ಮಾದರಿಯ ಹೊಸತಾದ ಆಡಳಿತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದಿಂದ ಸ್ಪರ್ದಿಸಿ ಸೋತ ಜನಪ್ರತಿನಿಧಿಗಳ ಪತ್ರಕ್ಕೆ ಬೆಲೆ ನೀಡಿ ಸಂವಿಧಾನ ವಿರೋಧಿ ಆಡಳಿತ ನಡೆಯುತ್ತಿರುವುದು ನಾಚಿಕೆಯ ವಿಷಯ ಎಂದು ಹೇಳಿದರು.


ಸಿದ್ದರಾಮಯ್ಯ ಆಡಳಿತದ ಅವಧಿ ಕೊನೆಯ ಹಂತ ತಲುಪುತ್ತಿದ್ದಂತೆ ಕಾಣುತ್ತಿದ್ದು,ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ತಿಳಿಸಿದರು. ಅಂಬೇಡ್ಕರ್ ಸಂವಿಧಾನದ ಪ್ರಕಾರ ಉತ್ತಮ ಆಡಳಿತಕ್ಕಾಗಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕಾಗಿದೆ,ಅದಕ್ಕೆ ಕಾರ್ಯಕರ್ತರು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.


ಸಮಾಜದ ಎಲ್ಲಾ ವರ್ಗದ ಕಾರ್ಯಕರ್ತರನ್ನು ಪಾರ್ಟಿಯಲ್ಲಿ ಜೋಡಿಸಿಕೊಂಡು ,ಒಂದಾಗಿ ಕೆಲಸ ಮಾಡಲು ನೂತನ ತಂಡಕ್ಕೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ತಾ.ಪಂ.ಜಿ.ಪಂ.ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ವಿಚಾರಗಳನ್ನು ಜನಮಾನಸದಲ್ಲಿ ತಿಳಿಸಿ ಎಲ್ಲಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಲು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಮನವಿ ಮಾಡಿದರು.


ಬಂಟ್ವಾಳದಲ್ಲಿ ಹಿಂದುತ್ವವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.ಕೇಂದ್ರ ಸರಕಾರ, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ದಿ ನಿಧಿಯಿಂದ ಬಂಟ್ವಾಳ ತಾಲೂಕಿನ ಪೊಳಲಿ,ಕಲ್ಲಡ್ಕ ಮತ್ತು ವೀರಕಂಭ ಈ ಮೂರು ರಸ್ತೆಗಳ ಅಭಿವೃದ್ದಿಗೆ ರೂ.5.27 ಕೋಟಿ ಹಣ ಬಿಡುಗಡೆಯಾಗಿದ್ದು, ನಾಳೆ ಜ.17 ರಂದು ಶಂಕುಸ್ಥಾಪನೆ ನಡೆಯಲಿದೆ ಎಂದು ತಿಳಿಸಿದರು.


ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ,ತಾಯಿ ಭಾರತೆಗಾಗಿ ಕೆಲಸ ಮಾಡುವ ಬಿಜೆಪಿಯ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ ಎಂಬುದನ್ನು ಅತ್ಯಂತ ವಿಶ್ವಾಸದಿಂದ ಹೇಳಬಲ್ಲೆ ಎಂದರು‌. ಅಭಿವೃದ್ದಿ ಮತ್ತು ಬದ್ದತೆಯ ಮೂಲಕ ಆಡಳಿತ ನಡೆಸುವ , ಕೇಂದ್ರ ಸರಕಾರದ ಜನಪರವಾದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಿ, ನರೇಂದ್ರ ಮೋದಿಗೆ ಶಕ್ತಿ ತುಂಬುವ ಕಾರ್ಯ ನಮ್ಮಿಂದಾಗಬೇಕಾಗಿದೆ ಎಂದು ತಿಳಿಸಿದರು. ದೇಶದ್ರೋಹದ ಕೆಲಸ ಮಾಡಿದ ದ್ರೋಹಿಗಳಿಗೆ ಬೆಂಬಲ ನೀಡುವ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದು ತಿಳಿಸಿದರು.


ಜಿ.ಪಂ.ಅಧ್ಯಕ್ಷ ಸತೀಶ್ ಕುಂಪಲ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.ವಿಕಾಸ್ ಪುತ್ತೂರು ಅವರು ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ನೂತನವಾಗಿ ಪದ ಸ್ವೀಕಾರ ಮಾಡಿದ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್ ಮಾತನಾಡಿ, ಪಕ್ಷ ನೀಡಿದ ಬೇರೆ ಬೇರೆ ಜವಬ್ದಾರಿಗಳನ್ನು ಯಶಸ್ವಿಯಾಗಿ ‌ನಿಭಾಯಿಸಿದ್ದೇನೆ. ಪ್ರಸ್ತುತ ಹಿರಿಯರು ನೀಡಿದ ಜವಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ,ಪಕ್ಷವನ್ನು ಅತ್ಯಂತ ಬಲಿಷ್ಠವಾಗಿ ಮಾಡಲು ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.


ಬಿಜೆಪಿ ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ದೇವಪ್ಪ ಪೂಜಾರಿ, ಅಪ್ಪಯ್ಯ ಮಣಿಯಾನಿ ,ಪ್ರೇಮಾನಂದ ಶೆಟ್ಟಿ, ರಾಧಾಕೃಷ್ಣ ಆಳ್ವ, ಪೂಜಾ ಪೈ, ಯತೀಶ್ ಅರ್ವಾರ್ ಉಪಸ್ಥಿತರಿದ್ದರು. ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಹಾಗೂ ಬಂಟ್ವಾಳ ಮಂಡಲದ ನೂತನ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್ ಅವರನ್ನು ಅಭಿನಂಧಿಸಲಾಯಿತು. ಮಂಡಲದ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಸುದರ್ಶನ ಬಜ ವಂದಿಸಿದರು.‌‌ ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.


Nk Channel Final 21 09 2023