Ad

ಪೊಲೀಸರಿಗೆ ಲವಲೇಶದ ಸ್ವಾಭಿಮಾನ ಇದ್ರೆ ನಿಜವಾದ ಆರೋಪಿಗಳ ಬಂಧನ ಮಾಡಲಿ: ಶ್ರೀಕಾಂತ್ ಶೆಟ್ಟಿ

ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣ‌ವನ್ನು ಖಂಡಿಸಿ ಹಿಂದೂಪರ ಸಂಘಟನೆಯಿಂದ ಜನಾಂದೋಲನ ಜನಜಾಗೃತಿ ಸಭೆ ನಡೆದಿದೆ.

ಮಂಗಳೂರು: ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣ‌ವನ್ನು ಖಂಡಿಸಿ ಹಿಂದೂಪರ ಸಂಘಟನೆಯಿಂದ ಜನಾಂದೋಲನ ಜನಜಾಗೃತಿ ಸಭೆ ನಡೆದಿದೆ.

Ad
300x250 2

ಉಳ್ಳಾಲ ತಾಲೂಕಿನ ಅಸೈಗೋಳಿ ಮೈದಾನದಲ್ಲಿ ಹಿಂದೂ ಜನಜಾಗೃತಿ ಸಮಿತಿ ಹೆಸರಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಮುಸ್ಲಿಂ ಲೀಗ್ ಪ್ರತಿನಿಧಿಗಳಾದ ಎಸ್.ಡಿ.ಪಿ.ಐ ನವರು ಚೂರಿ ಹಾಕ್ತಾರೆ. ಪಿ.ಎಫ್.ಐ ಬ್ಯಾನ್ ಆದ್ರೂ ಅದರ ರಾಜಕೀಯ ಮುಖವಾಣಿ ಎಸ್.ಡಿ.ಪಿ.ಐ ಈ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ವರ್ತನೆ ಬಹಳ‌ ವಿಚಿತ್ರ ಎನಿಸುತ್ತದೆ.

G

ಪೊಲೀಸರಿಗೆ ಲವಲೇಶದ ಸ್ವಾಭಿಮಾನ ಇದ್ರೆ ನಿಜವಾದ ಆರೋಪಿಗಳ ಬಂಧನ ಮಾಡಲಿ. ಯಾರೋ ಒಂದಿಬ್ಬರನ್ನು ಅರೆಸ್ಟ್ ಮಾಡೋದಲ್ಲ. ಚೂರಿ ಹಾಕಿದ ನಿಜವಾದ ಆರೋಪಿಗಳ ಬಂಧನವಾಗಲಿ. ಉಳ್ಳಾಲದಲ್ಲಿ ಥಿಬ್ರಲ್ ರೈಡ್ ಹೋದ್ರೆ ಅವರನ್ನು ಪೊಲೀಸರು ನಿಲ್ಲಿಸುವಂತಿಲ್ಲ.

ನಿಲ್ಲಿಸಿದ್ರೆ ಅಲ್ಲಿಂದ ಪೊಲೀಸರನ್ನು ಹೊರಗೆ ಬರೋದಕ್ಕೆ ಬಿಡದಂತ ಪರಿಸ್ಥಿತಿಯಿದೆ. ಬೋಳಿಯಾರ್ ಘಟನೆ ಹೊರಗಿನವರಿಂದಾಗಿ ಆಗಿದೆ ಎಂದು ಸ್ಪೀಕರ್ ಹೇಳ್ತಾರೆ. ಹೊರಗಿನವರು ಬಂದು ಶಾಂತಿ ಕದಡುವ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ನೀವು ಹೊರಗಿನವರಾ..? ಹಿಂದೂಗಳು ಹೊರಗಿನವರಾ..?. ಹಿಂದೂಗಳು ಯಾವಾಗ ಉಳ್ಳಾಲಕ್ಕೆ ಹೊರಗಿನವರಾದ್ರೂ. ಉಳ್ಳಾಲವನ್ನು‌‌ ನಿಮ್ಮ ಕೋಟೆ ಮಾಡಲು ಬಿಡೋದಿಲ್ಲ. ಧರ್ಮದ್ರೋಹಿಗಳಿಗೆ, ದೇಶದ್ರೋಹಿಗಳಿಗೆ ಮುಂದೆ ಉತ್ತರ ನೀಡ್ತೇವೆ.

ಹೊರಗಿನವರು ಯಾರು ಒಳಗಿನವರು ಯಾರೆಂದು ನಾವು ನಿರ್ಧಾರ ಮಾಡ್ತೇವೆ. ಯಾರ ಮುಲಾಜಿಗೆ ಬಿದ್ದು ನೀವು ಕೆಲಸ ಮಾಡ್ತಾ ಇದೀರಾ?. ಸಿಎಎ ಗಲಾಟೆ ಸಮಯದಲ್ಲಿ ಪೊಲೀಸರಿಗೆ ಭದ್ರತ ಕೊಡಲಾಗಿತ್ತು. ಪೊಲೀಸರೇ ಹೊರ ಬರದಂಥ ಸ್ಥಿತಿ ಉಳ್ಳಾಲದಲ್ಲಿ ಇದೆ. ಸ್ಪೀಕರ್ ಖಾದರ್ ಅವರು ಬೋಳಿಯಾರ್ ಘಟನೆಗೆ ಹೊರಗಿನವರು ಕಾರಣ ಅಂತಾರೆ.

C

ಆದರೆ ನೀವು ಯಾವಾಗ ಇಲ್ಲಿ ಒಳಗಿನವರು ಆಗಿದ್ದು, ನಾವು ಯಾವಾಗ ಹೊರಗಿನವರು ಆಗಿದ್ದು. ಹಿಂದೂಗಳು ಯಾವಾಗ ಇಲ್ಲಿ ಹೊರಗಿನವರು ಆಗಿದ್ದು ಖಾದರ್ ಅವರೇ?. ಪೊಲೀಸ್ ಕಮಿಷನರ್ ಯೋಚನೆ ಮಾಡಿಕೊಂಡು ಮಾತನಾಡಬೇಕು. ಭಾರತ್ ಮಾತೆಗೆ ಜೈಕಾರ ಹಾಕೋದು ಪೊಲೀಸರಿಗೆ ಪ್ರಚೋದನಕಾರಿ ಘೋಷಣೆಯಾಗಿ ಕಾಣುತ್ತೆ. ಉಳ್ಳಾಲದಲ್ಲಿ ಹೊರಗಿನವರು ಯಾರು, ಒಳಗಿನವರು ಯಾರು ಅಂತ ನಾವು ನಿರ್ಧಾರ ಮಾಡ್ತೇವೆ. ಭಾರತ್ ಮಾತೆಗೆ ಜೈಕಾರ ಹಾಕೋರು ಒಳಗಿನವರು, ಪಾಕಿಸ್ತಾನಕ್ಕೆ ಜೈಕಾರ ಹಾಕೋರು ಹೊರಗಿನವರು ಎಂದರು.

ಸಭೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್, ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಹರೀಶ್ ಪೂಂಜಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Ad
Ad
Nk Channel Final 21 09 2023
Ad