ಮಂಗಳೂರು: ರೈತರಿಂದ ನೇರವಾಗಿ ಮುಡಾ ನಗರಾಭಿವೃದ್ಧಿ ಪ್ರಾಧಿಕಾರದ ಜಮೀನು ಪಡೆದಿದ್ದೇ ಆದಲ್ಲಿ ಅವರಿಗೆ 50-50ನಲ್ಲಿ ಸೈಟ್ ಕೊಡಲೇಬೇಕು. ಈ 50-50ಯಲ್ಲಿ ದುರುಪಯೋಗ ಆಗಿದ್ದಲ್ಲಿ ಅವರಿಗೆ ಶಿಕ್ಷೆಯಾಗಬೇಕು. ತಪ್ಪಾಗಿದ್ದರೆ ಶಿಕ್ಷೆ ಅನುಭವಿಸಲೇಬೇಕು. ಯಾರೇ ಆಗಲಿ, ನನ್ನ ಸಂಬಂಧಿಗಳೇ ಆಗಲಿ ಯಾರೇ ಆಗಲಿ ಕಾನೂನು ವಿರುದ್ಧ ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮದವರು ‘ಮುಡಾ ಹಗರಣದಲ್ಲಿ ಮಹೇಂದ್ರ ಎಂಬವರು ಜಿ.ಟಿ.ದೇವೇಗೌಡರ ಬೇನಾಮಿ ಆಗಿರಬಹುದು. ಅವರಿಗೆ ಮುಡಾದ 19ಸೈಟ್ ಮಂಜೂರಾಗಿದೆ. ಇದನ್ನು ತನಿಖೆ ಮಾಡಬೇಕು ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ಆರೋಪದ ಬಗ್ಗೆ’ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿ.ಟಿ.ದೇವೇಗೌಡ, ಒಂದು ಎಕರೆ ಜಾಗವನ್ನು ಪೂರ್ತಿ ಸ್ವಾಧೀನ ಪಡಿಸಿಕೊಂಡಿದ್ದು,
ದುಡ್ಡಿನ ಪರಿಹಾರವನ್ನು ಕೊಟ್ಟಿದ್ದರೆ ಮಾತ್ರ ಒಂದು ಸೈಟು. ಆ ಜಮೀನಿಗೆ ಪರಿಹಾರವೇ ಕೊಡದಿದ್ದಲ್ಲಿ, 50-50ಯಲ್ಲಿ ಸೈಟು ಪಡೆದಿದ್ದಲ್ಲಿ ರೈತನ ಜಮೀನಿಗೆ ಕಾನೂನು ಬದ್ಧವಾಗಿ ಕೊಡಬೇಕಿದ್ದನ್ನು ಮೊದಲು ತಿಳಿದುಕೊಳ್ಳಬೇಕು ಎಂದು ಜಿ.ಟಿ.ದೇವೇಗೌಡ ಹೇಳಿದರು.