Bengaluru 22°C
Ad

ಒಂದಡೆ ಉದ್ವಿಗ್ನ, ಮತ್ತೊಂದಡೆ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು

Sweet

ಮಂಗಳೂರು: ಬಂಟ್ವಾಳ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಒಂದು ಕಡೆ ಬಂಟ್ವಾಳ ತಾಲೂಕಿ ಬಿಸಿ ರೋಡ್ ​ನಲ್ಲಿ ಹಿಂದೂ-ಮುಸ್ಲಿಮರ ಹೇಳಿಕೆಯಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮತ್ತೊಂದು ಕಡೆ ಇದೇ ಬಂಟ್ವಾಳ ತಾಲೂಕಿನ ಮಾಣಿ ಜಂಕ್ಷನ್ ಮತ್ತು ಕೊಡಾಜೆಯಲ್ಲಿ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಸಿಹಿ, ಐಸ್​​ಕ್ರೀಂ, ನೀರಿನ ಬಾಟಲಿ ವಿತರಣೆ ಮಾಡಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

ಮಾಣಿ ಜಂಕ್ಷನ್​​ನಲ್ಲಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಕೇಸರಿ ಶಾಲು‌ ಹಾಕಿಕೊಂಡು ಹಿಂದೂ ಯುವಕರು ಮುಸ್ಲಿಂ ಮುಖಂಡರು ಮತ್ತು ಮಕ್ಕಳಿಗೆ ಸಿಹಿ, ಐಸ್​ಕ್ರೀಂ, ನೀರಿನ ಬಾಟಲ್ ವಿತರಣೆ ಮಾಡಿದರು. ಈ ಮಾಣಿ ಜಂಕ್ಷನ್​ನಲ್ಲಿ ಬಿಸಿ ರೋಡ್​ ಕೇವಲ 20 ಕಿಮೀ ದೂರದಲ್ಲಿದೆ.

ಕೊಡಾಜೆಯಲ್ಲೂ ಕೂಡ ಹಿಂದೂಗಳು ಈದ್​ ಮಿಲಾದ್​ ಮೆರವಣಿಗೆಯಲ್ಲಿದ್ದ ಮುಸ್ಲಿಮರಿಗೆ ಸಿಹಿ ಹಂಚಿದರು. ಜುಮ್ಮಾ ಮಸೀದಿಯಿಂದ ಬಂದಿದ್ದ ಈದ್ ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಬಾಂಧವರಿಗೆ ಹಿಂದೂಗಳು ಸ್ವೀಟ್ ಬಾಕ್ಸ್ ವಿತರಿಸಿ ಹಬ್ಬದ ಶುಭಾಶಯ ಕೋರಿದರು.

Ad
Ad
Nk Channel Final 21 09 2023